ಪತಿಯಿಂದಲೇ ಪತ್ನಿಯ ಕೊಲೆ

306

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಪತಿಯಿಂದಲೇ ಪತ್ನಿಯ ಕೊಲೆಯಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. 42 ವರ್ಷದ ಅನುಸೂಯ ಕೊಲೆಯಾದ ದುರ್ದೈವಿ. ಈಕೆ ಪತಿ ತಾನೇಂದ್ರ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಚಾಕುವಿನಿಂದ ಇರಿದು ಕೊಲೆ ಮಾಡಿದ ಕೃತ್ಯ ಯಶವಂತಪುರದಲ್ಲಿ ನಡೆದಿದೆ. ಪತ್ನಿಯನ್ನು ಕೊಲೆ ಮಾಡಿದ್ದಲ್ಲದೆ 13 ವರ್ಷದ ಮಗಳ ಕೊಲೆಗೂ ಯತ್ನಿಸಿದ್ದನಂತೆ. ಅಲ್ದೇ, ತಾನೇ ಪೊಲೀಸರಿಗೆ ಫೋನ್ ಮಾಡಿ ಕೊಲೆಯಾಗಿದೆ ಎಂದು ಮಾಹಿತಿ ನೀಡಿದ್ದಾನೆ. ಯಶವಂತಪುರ ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಪತಿಯೇ ಕೊಲೆಯ ಆರೋಪಿ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!