ಶಿವಮೂರ್ತಿ ಶ್ರೀಗಳ ಫೋಟೋ ಮುರುಘಾ ಮಠದಿಂದ ಹೊರಗೆ

156

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಮುರುಘಾಮಠದ ಶಿವಮೂರ್ತಿ ಶ್ರೀಗಳ ಫೋಟೋವನ್ನು ತೆಗೆದು ಹಾಕಲಾಗಿದೆ. ಈ ಮೂಲಕ ಶ್ರೀಗಳನ್ನು ಪೀಠದಿಂದ ಇಳಿಸುವುದು ಬಹುತೇಕ ಖಚಿತವಾದಂತಿದೆ.

ಮಠದ ಆವರಣದ ನೀಲಕಂಠೇಶ್ವರ ದೇಗುಲದಲ್ಲಿ ಹಲವಾರು ವರ್ಷಗಳಿಂದ ಹಾಕಲಾಗಿದ್ದ ಫೋಟೋವನ್ನು ತೆಗೆದು, ಶಾಂತವೀರ ಸ್ವಾಮೀಜಿಗಳ ಫೋಟೋ ಹಾಕಲಾಗಿದೆ. ಇದರ ಜೊತೆಗೆ ಮಕ್ಕಳ ದತ್ತು ಕೇಂದ್ರವನ್ನು ಸ್ಥಳಾಂತರಿಸಲಾಗುತ್ತಿದೆ. ನಾಲ್ವರು ಬಾಲಕಿಯರು, ಐವರು ಬಾಲಕರು ಸೇರಿ 9 ಮಕ್ಕಳನ್ನು ಬೆಂಗಳೂರಿನ ಸರ್ಕಾರಿ ದತ್ತು ಕೇಂದ್ರಕ್ಕೆ ವರ್ಗಾವಣೆ ಮಾಡಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!