Search

ಓವರ್ ಟೇಕ್ ಮಾಡಲು ಹೋಗಿ ಮೂವರ ಪ್ರಾಣ ಹೋಯಿತು!

154

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ಲಾರಿ ಓವರ್ ಟೇಕ್ ಮಾಡಲು ಹೋದ ಫಾರ್ಚುನರ್ ಕಾರೊಂದು ಅಪಘಾತಕ್ಕಿಡಾಗಿ 3 ವರ್ಷದ ಮಗು ಸೇರಿ ಮೂವರು ಮೃತಪಟ್ಟಿದ್ದು, ಐವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 4ರ ವಿಜಾಪುರ ಗೇಟ್ ಬಳಿ ನಡೆದಿದೆ.

ಜಾಕೀರ್ ಅಹಮ್ಮದ್(60), ತಬಸ್ಸುಮ್(28) ಹಾಗೂ 3 ವರ್ಷದ ಮಗು ಹಯಾತ್ ಫಾತಿಮಾ ಮೃತ ದುರ್ದೈವಿಗಳು. ನಾಜಿಯಾ, ಶೋಯಬ್ ಅಹ್ಮದ್, ಇಮ್ರಾನ್ ಖಾನ್, ಸಬಾ, ತಬ್ರೀಜ್ ಅಹ್ಮದ್ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು ಎಚ್ಎಸ್ಆರ್ ಲೇಔಟ್ ನಿವಾಸಿಗಳಾದ ಇವರು ಗೋವಾ ಪ್ರವಾಸ ಮುಗಿಸಿಕೊಂಡು ಬರುವಾಗ, ಲಾರಿ ಹಿಂದಿಕ್ಕಲು ಹೋಗಿ ನಿಯಂತ್ರಣ ತಪ್ಪಿ ಸೋಮವಾರ ಈ ಅನಾಹುತ ಸಂಭವಿಸಿದೆ.




Leave a Reply

Your email address will not be published. Required fields are marked *

error: Content is protected !!