ಮಹಾ ರಾಜಕೀಯದಲ್ಲಿ ಸಂಚಲನ, ಡಿಸಿಎಂ ಆಗಿ ಅಜಿತ್ ಪವಾರ್

183

ಪ್ರಜಾಸ್ತ್ರ ಸುದ್ದಿ

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸುವ ಘಟನೆಯೊಂದು ನಡೆದಿದೆ. ಎನ್ ಸಿಪಿಯ ಶಾಸಕ, ವಿಪಕ್ಷ ನಾಯಕ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ದಿಢೀರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಶಿವಸೇನೆ ಎರಡು ಬಣವಾದ ಮೇಲೆ ಕಾಂಗ್ರೆಸ್, ಎನ್ ಸಿಪಿ ಬೆಂಬಲದ ಸರ್ಕಾರ ಪತನಗೊಂಡಿತು. ಹೀಗಾಗಿ ಏಕನಾಥ್ ಶಿಂದೆ ಬಣಕ್ಕೆ ಬಿಜೆಪಿ ಬೆಂಬಲ ನೀಡಿ ಸರ್ಕಾರ ರಚನೆ ಮಾಡಿತು. ಉದ್ಧವ್ ಠಾಕ್ರೆ ಬೇರ್ಪಟ್ಟಿತು. ಇದೀಗ ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರನ್ನು ಸೆಳೆದು ಡಿಸಿಎಂ ಸ್ಥಾನ ನೀಡಲಾಗಿದೆ. ಇದೀಗ ಸಂಚಲನ ಸೃಷ್ಟಿಸಿದೆ.

ಅಜಿತ್ ಜೊತೆಗೆ ಇನ್ನು ಕೆಲ ಎನ್ ಸಿಪಿ ಶಾಸಕರು ರಾಜ್ಯಪಾಲರ ಭೇಟಿಗೆ ಹೋಗಿದ್ದಾರೆಂತೆ. ಇವರು ಸಚಿವ ಸಂಪುಟ ಸೇರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಎನ್ ಸಿಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನಗೊಂಡಿದ್ದ ಅಜಿತ್ ಪವಾರ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!