ಹೊಸ ಚಿತ್ರದ ಬಗ್ಗೆ ಮೋಹಕತಾರೆ ಟ್ವೀಟ್

297

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಂದನವನದ ಮೋಹಕತಾರೆ ರಮ್ಯಾ, ಚಿತ್ರಂಗದಿಂದ ದೂರ ಸರಿದು ಸುಮಾರು 8 ವರ್ಷಗಳ ಮೇಲಾಗಿದೆ. ಹೀಗಾಗಿ ಅವರ ಅಭಿಮಾನಿಗಳಿಗೆ ಸಾಕಷ್ಟು ಬೇಸರವಾಗಿತ್ತು. ಈಗ ಖುಷಿಯ ಸುದ್ದಿಯೊಂದನ್ನು ಕೊಟ್ಟಿದ್ದು, ಉತ್ತರಕಾಂಡ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಡಾಲಿ ಧನಂಜಯ್ ಜೊತೆಗೆ ನಟಿ ರಮ್ಯಾ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ರತ್ನನ್ ಪರಪಂಚ ಸಿನಿಮಾ ಮಾಡಿ ಸಕ್ಸಸ್ ಆಗಿರುವ ರೋಹಿತ್ ಪದಕಿ ತಂಡ, ಇದೀಗ ಪಕ್ಕಾ ಉತ್ತರ ಕರ್ನಾಟಕ ಭಾಷೆಯಲ್ಲಿರುವ, ಈ ಭಾಗದಲ್ಲಿ ಹೆಚ್ಚು ಶೂಟಿಂಗ್ ಮಾಡಲಿರುವ, ಈ ಭಾಗದ ಕಥೆಯೊಂದನ್ನು ಹೇಳಲು ಸಿದ್ಧವಾಗಿದೆ.

ಮುಹೂರ್ತದ ಸಂದರ್ಭದ ವಿಡಿಯೋ ಸೇರಿದಂತೆ ನಟಿ ರಮ್ಯಾ ಬ್ಯಾಗ್ರೌಂಡ್ ಡೈಲಾಗ್ ಹೇಳುವ ತುಣುಕೊಂದನ್ನು ಬಿಟ್ಟಿದ್ದು, ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದೆ. ಮ್ಯೂಸಿಕ್ ಸಹ ಅಷ್ಟೇ ಜೋರಾಗಿದ್ದು, ಸಿನಿ ಪ್ರಿಯರಿಗೆ ಉತ್ತರಕಾಂಡ ಖಂಡಿತ ಇಷ್ಟವಾಗಲಿದೆ.




Leave a Reply

Your email address will not be published. Required fields are marked *

error: Content is protected !!