ಸಿಎಂ ಮುಂದೆ ಹೊಸ ಸವಾಲು.. ಬಿಎಸ್ವೈ ಕಟ್ಟಿಹಾಕಲು ಹೈಕಮಾಂಡ್ ಪ್ಲಾನ್!

428

ಬೆಂಗಳೂರು: ಉಪ ಕದನದಲ್ಲಿ ಬಿಜೆಪಿ ಭರ್ಜರಿಯಾಗಿ ವಿಜಯ ಸಾಧಿಸುವ ಮೂಲಕ ಸರ್ಕಾರವನ್ನ ಸೇಫ್ ಮಾಡಿಕೊಂಡಿದೆ. ಅನರ್ಹ ಶಾಸಕರಿಗೆ ನೀಡಿದ್ದ ಅಭಯದಂತೆ ಬಹುತೇಕ ಎಲ್ಲರನ್ನ ಗೆಲ್ಲಿಸಿಕೊಂಡು ಬಂದಿದೆ ಬಿಜೆಪಿ. ಇದೀಗ ಏನಿದ್ರೂ ಸಚಿವ ಖಾತೆಯ ಲೆಕ್ಕಾಚಾರ ಶುರು. ಹೀಗಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ಇದೀಗ ಮುಂದಿನ ಪ್ಲಾನ್ ಬಗ್ಗೆ ಲೆಕ್ಕಾ ಹಾಕ್ತಿದ್ದಾರೆ.

ಉಪ ಚುನಾವಣೆಯಲ್ಲಿ ಗೆದ್ದು ಬಂದವರಿಗೆ ಸಚಿವ ಸ್ಥಾನ ನೀಡುವುದಾಗಿ ಬಿಎಸ್ವೈ ಹಿಂದೆಯೇ ಹೇಳಿದ್ರು. ಗೆದ್ದು ಬಂದ ಶಾಸಕರಿಗೆ ಯಾವ ಖಾತೆಯನ್ನ ನೀಡಲಾಗುತ್ತೆ. ಇಲ್ಲಿ ಮತ್ತೆ ಅವರೇನಾದ್ರೂ ಖಾತೆಯ ಡಿಮ್ಯಾಂಡ್ಸ್ ಇಡ್ತಾರಾ ಅನ್ನೋ ಕುತೂಹಲವಿದೆ. ಹುಣಸೂರು ಕ್ಷೇತ್ರದಲ್ಲಿ ಸೋತ ಹೆಚ್.ವಿಶ್ವನಾಥ ಹಾಗೂ ಹೊಸಕೋಟೆಯಲ್ಲಿ ಸೋತ ಎಂಟಿಬಿ ನಾಗರಾಜ ಅವರನ್ನ ಎಂಎಲ್ ಸಿ ಮಾಡುವ ಮೂಲಕ ಸಚಿವ ಸ್ಥಾನ ಭಾಗ್ಯ ಕಲ್ಪಿಸಲಾಗುತ್ತಾ ಅನ್ನೋ ಕುತೂಹಲವಿದೆ.

ಇದರ ನಡುವೆ ಬಿಎಸ್ವೈ ಪ್ರಭಾವಿ ನಾಯಕತ್ವಕ್ಕೆ ಬ್ರೇಕ್ ಹಾಕಲು ಹೈಕಾಂಡ್ ಮುಂದಾಗಿದೆ ಅಂತಾ ಹೇಳಲಾಗ್ತಿದೆ. ಎರಡನೇ ಬಾರಿ ಸರ್ಕಾರ ರಚನೆ ಮಾಡುವಲ್ಲಿ ಹಾಗೂ ಮಿನಿ ಕದನದಲ್ಲಿ ಹೈಕಮಾಂಡ್ ಸಂಪೂರ್ಣವಾಗಿ ಬಿಎಸ್ವೈ ಹೆಗಲಿಗೇರಿಸುತ್ತು. ಇದರಲ್ಲಿ ಅವರು ಗೆದ್ದಿರುವುದ್ರಿಂದ ಮತ್ತಷ್ಟು ಪ್ರಭಾವ ಹೆಚ್ಚಿದೆ. ಇದಕ್ಕೆ ಕಡಿವಾಣ ಹಾಕಲು ಮುಂದಿನ ಸಚಿವ ಸಂಪುಟ ವಿಸ್ತರಣೆಯನ್ನ ದಾಳವಾಗಿ ಬಳಸಿಕೊಳ್ಳಲಾಗುತ್ತೆ ಅನ್ನೋ ಮಾತುಗಳು ಕೇಳಿ ಬಂದಿವೆ. ಇದೆಲ್ಲದರ ನಡುವೆ ಇಂದು ರಾಜ್ಯ ರಾಜಕೀಯದಲ್ಲಿ ಏನೆಲ್ಲ ಬೆಳವಣಿಗೆಯಾಗುತ್ತೆ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!