ನಿರ್ಭಯಾ ಅಪರಾಧಿಗಳಿಗೆ ಗಲ್ಲು: ಆಕೆ ತಾಯಿ ಏನಂದ್ರು.. ಜಗ್ಗೇಶ 1 ಲಕ್ಷ ಕೊಟ್ಟಿದ್ದು ಯಾರಿಗೆ?

387

ನವದೆಹಲಿ: 8 ವರ್ಷಗಳ ಬಳಿಕ ಕಡೆಗೂ ನಿರ್ಭಯಾ ಹತ್ಯಾಚಾರಿಗಳಿಗೆ ಇಂದು ಗಲ್ಲು ಶಿಕ್ಷೆಯಾಗಿದೆ. ಪ್ರತಿಬಾರಿ ಶಿಕ್ಷೆ ಪ್ರಕಟವಾದ್ಮೇಲೆ ಒಂದಲ್ಲ ಒಂದು ಪ್ಲಾನ್ ಮಾಡಿ ಕಾನೂನಿನ ಮೂಲಕ ಎಸ್ಕೇಪ್ ಆಗ್ತಿದ್ದ ನೀಚರು ನಾಲ್ಕನೇ ಬಾರಿಗೆ ಮಿಸ್ ಆಗ್ಲಿಲ್ಲ. ಹೀಗಾಗಿ ಇಂದು ಬೆಳಗ್ಗೆ 5.30ಕ್ಕೆ ನೇಣಿಗೇರಿಸಲಾಗಿದೆ. ಈ ಬಗ್ಗೆ ನಿರ್ಭಯಾ ತಾಯಿ ಸೇರಿದಂತೆ ಯಾರೆಲ್ಲ ಏನು ಹೇಳಿದ್ದಾರೆ ಅನ್ನೋದು ಇಲ್ಲಿದೆ.

ಕೊನೆಗೂ ಅತ್ಯಾಚಾರಗಳಿಗೆ ಗಲ್ಲು ಶಿಕ್ಷೆಯಾಗಿದೆ. ಈ ದಿನವನ್ನ ನನ್ನ ಮಗಳಿಗೆ ಅರ್ಪಿಸುತ್ತೇನೆ ಎಂದು ನಿರ್ಭಯಾ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ. ನ್ಯಾಯಾಂಗ ವ್ಯವಸ್ಥೆ ಹಾಗೂ ಸರ್ಕಾರಕ್ಕೆ ಧನ್ಯವಾದಗಳನ್ನ ಹೇಳುತ್ತೇನೆ. 2012 ರಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಇದಕ್ಕಾಗಿ ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಇಂದು ಎಲ್ಲವೂ ಅಂತ್ಯವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.

ಲೇಟಾಗಿಯಾದ್ರೂ ನ್ಯಾಯ ಸಿಕ್ಕಿದೆ. ನಿರ್ಭಯಾ ಜೀವಂತವಾಗಿದ್ರೆ ಮತ್ತಷ್ಟು ಖುಷಿ ಸಿಗ್ತಿತ್ತು ಎಂದು ಈ ಕೇಸ್ ಪರ ವಾದ ಮಾಡಿದ ವಕೀಲೆ ಸೀಮಾ ಕುಷ್ಮಾಹ ಹೇಳಿದ್ದಾರೆ. ನಿರ್ಭಯಾ ಅಪರಾಧಿಗಳು ಕೇವಲ ಆಕೆಯನ್ನ ಅತ್ಯಾಚಾರ ಮಾಡಿಲ್ಲ. ಆಕೆಯನ್ನ ನಾಶ ಮಾಡಿದ್ದಾರೆ. ಯಾವ ರೀತಿ ಯಾಕೆ ದೇಹ ನಾಶ ಮಾಡಿದ್ರೂ ಅಂದ್ರೆ ಪ್ರಾಣಿಗಳು ಸಹ ಆ ರೀತಿ ಮಾಡುವುದಿಲ್ಲವೆಂದು ಆಕ್ರೋಶ ಹೊರ ಹಾಕಿದ್ರು.

ಸಂವಿಧಾನದನ ಅನುಗುಣವಾಗಿ ಎಲ್ಲ ಕಾರ್ಯ ಮುಗಿಯಬೇಕಿತ್ತು. ಹೀಗಾಗಿ ತಡರಾತ್ರಿ ಹೈಕೋರ್ಟ್ ಹಾಗೂ ಸುಪ್ರೀಂ ಮುಂದೆ ಹೋಗಿ ಜೀವ ಉಳಿಸುವ ಪ್ರಯತ್ನ ಮಾಡಲಾಯ್ತು ಎಂದು ನಿರ್ಭಯಾ ಅಪರಾಧಿಗಳ ಪರ ವಕೀಲ ಎಪಿ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಅಪರಾಧಿಗಳಿಗೆ ಗಲ್ಲುಗೇರಿಸಿದ ಹ್ಯಾಂಗ್ ಮನ್ ಗೆ ನವರಸನಾಯಕ ಜಗ್ಗೇಶ ಅವರು ಒಂದು ಲಕ್ಷ ರೂಪಾಯಿ ಚೆಕ್ ಗಿಫ್ಟ್ ಆಗಿ ನೀಡಿದ್ದಾರೆ. ಕೊಟ್ಟ ಮಾತಿನಂತೆ 1 ಲಕ್ಷ ರೂಪಾಯಿ ನಿರ್ಭಯಾ ಹಂತಕರ ಹ್ಯಾಂಗ್ ಮನ್ ಗೆ ನನ್ನ ಧೇಣಿಗೆ.. ದೇವನೊಬ್ಬನಿರುವ ಅವ ಎಲ್ಲ ನೋಡುತಿರುವ ಎಂದು ತಮ್ಮ ಟ್ವೀಟ್ ನಲ್ಲಿ ಚೆಕ್ ಸಮೇತ ಬರೆದುಕೊಂಡಿದ್ದಾರೆ.

ಇನ್ನು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸೇರಿದಂತೆ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ತಂತಮ್ಮ ಟ್ವೀಟ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ನಿರ್ಭಯಾಗೆ ಕೊನೆಗೂ ನ್ಯಾಯ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!