ಜನರ ರಕ್ತ ಕುದಿಯುವಂತೆ ಮಾಡ್ತಿದೆ ಹತ್ಯಾಚಾರಿಗಳ ನಾಟಕ.. ಇದೀಗ ಅಂತಾರಾಷ್ಟ್ರೀಯ ಕೋರ್ಟ್ ಮೊರೆ

346

ನವದೆಹಲಿ: ನಿರ್ಭಯಾ ಹತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳು ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಮೂಲಕ ನಾಲ್ಕನೇ ಡೆತ್ ವಾರೆಂಟ್ ಸಹ ಜಾರಿ ಆಗೋದು ಡೌಟ್ ಆಗಿದೆ. ಮಾರ್ಚ್ 20ರ ಬೆಳಗ್ಗೆ ಗಲ್ಲು ಶಿಕ್ಷೆ ನೀಡಲು ದೆಹಲಿಯ ಪಟಿಯಾಲಾ ಕೋರ್ಟ್ ಆದೇಶ ನೀಡಿದೆ.

ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಟ ಹೂಡಿದ್ರು. ರಾಷ್ಟ್ರಪತಿಗೆ ಕ್ಷಮಾಧಾನ ಅರ್ಜಿಯನ್ನ ಒಬ್ಬರಾದ್ಮೇಲೆ ಒಬ್ಬರು ಸಲ್ಲಿಸಿದ್ರು. ಕ್ಯುರೆಟೀವ್ ಅರ್ಜಿಗಳನ್ನ ಸಹ ಒಬ್ಬೊಬ್ಬರಾಗಿ ಸಲ್ಲಿಸುತ್ತಾ ಬಂದರು. ಹೀಗಾಗಿ ಮೂರು ಬಾರಿ ಗಲ್ಲು ಶಿಕ್ಷೆಯಿಂದ ಎಸ್ಕೇಪ್ ಆದ್ರು. ಸುಪ್ರೀಂ ಕೋರ್ಟ್, ರಾಷ್ಟ್ರಪತಿ ನೀಚರ ಅರ್ಜಿಗಳನ್ನ ತಿರಸ್ಕಾರ ಮಾಡ್ತಾ ಬಂದ್ರು. ಇದೀಗ ನಾಲ್ಕನೇ ಡೆತ್ ವಾರೆಂಟ್ ಹೊರಡಿಸಿದ್ದು, ದೆಹಲಿ ಹಾಗೂ ಕೇಂದ್ರ ಸರ್ಕಾರದಿಂದ ನಮ್ಗೆ ಅನ್ಯಾಯವಾಗಿದೆ. ಸಿಬಿಐ ತನಿಖೆಯಾಗ್ಲಿ ಎಂದು ಉಲ್ಲೇಖಿಸಿ ಅಂತಾರಾಷ್ಟ್ರೀಯ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಮತ್ತೊಂದು ನಾಟಕ ಶುರು ಮಾಡಿದ್ದಾರೆ.

ಇದನ್ನ ನೋಡ್ತಿದ್ರೆ ಎಲ್ಲವೂ ತುಂಬಾ ವ್ಯವಸ್ಥಿತವಾಗಿ ನಡೆಯುತ್ತಿದೆ ಅನ್ನೋದು ಅನಿಸ್ತಿದೆ. ಇಷ್ಟೊಂದು ಸಾರಿ ನೇಣು ಕುಣಿಕೆಯಿಂದ ತಪ್ಪಿಸಿಕೊಳ್ತಾರೆ ಅಂದ್ರೆ, ಇವರು ಎಷ್ಟರ ಮಟ್ಟಿಗೆ ಪ್ಲಾನ್ ಮಾಡ್ತಿರಬೇಕು. ಇವರಿಗೆ ಆರ್ಥಿಕ ನೆರವು ಸಿಗ್ತಿರುವುದು ಹೇಗೆ ಅನ್ನೋ ಹಲವಾರು ಪ್ರಶ್ನೆಗಳು ಮೂಡಿವೆ.




Leave a Reply

Your email address will not be published. Required fields are marked *

error: Content is protected !!