ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನ: ತಹಶೀಲ್ದಾರ್ ಗೆ ಮನವಿ

631

ಸಿಂದಗಿ: ಪಟ್ಟಣದ ಸಿಂದಗಿ ಗಣಿಹಾರ ರಸ್ತೆಯಲ್ಲಿ ಕ್ರಾಂತಿ ಪತ್ರಿಕೆಯ ವರದಿಗಾರ ನಿಂಗರಾಜ ಅತನೂರ ಮೇಲೆ ಅನಾಮಿಕ ವ್ಯಕ್ತಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಈ ಸಂಬಂಧ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯ್ತು.

ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ತಹಶೀಲ್ದಾರ್ ಗೆ ಮನವಿ ಸಲ್ಲಿಸುವ ಮೂಲಕ ಸೂಕ್ತ ತನಿಖೆಗೆ ಒತ್ತಾಯಿಸಲಾಯ್ತು. ಈ ವೇಳೆ ಮಾತ್ನಾಡಿದ ಕೆಲ ಪತ್ರಕರ್ತರು, ಈ ರೀತಿ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ ಅಂತಾ ಹೇಳಿದ್ರು. ಅಲ್ದೇ ಆದಷ್ಟು ಬೇಗ ಆರೋಪಿಗಳನ್ನ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯ್ತು. ತಹಶೀಲ್ದಾರ್ ಪರವಾಗಿ ಸಿರಸ್ತೆದಾರ್ ಸುರೇಶ ಮ್ಯಾಗೇರಿ ಮನವಿ ಪತ್ರ ಸ್ವೀಕರಿಸಿದ್ರು.

ಘಟನೆ ಹಿನ್ನೆಲೆ:

ಕಳೆದ ನವೆಂಬರ್ 3ರ ಸಂಜೆ ಸುಮಾರು 7.30 ರ ಟೈಂನಲ್ಲಿ ವರದಿಗಾರ ನಿಂಗರಾಜ ಅತನೂರ, ತಮ್ಮ ಊರಿಗೆ ಹೋಗುವ ಟೈಂನಲ್ಲಿ ಸಿಂದಗಿ-ಗಣಿಹಾರ ರಸ್ತೆ ಹತ್ತಿರ ನಂಬರ್ ಪ್ಲೇಟ್ ಇಲ್ಲದ ಇನೋವಾ ಕಾರಿನಲ್ಲಿ ಬಂದ ಅನಾಮಿಕ ವ್ಯಕ್ತಿಗಳು, ಇವರ ಕಾರನ್ನ ಹಿಂಬಾಲಿಸಿ ಮಚ್ಚು, ಲಾಂಗುಗಳನ್ನ ತೋರಿಸಿದ್ದಾರೆ. ಅಲ್ದೇ, ಇವರ ಮೇಲೆ ಹಲ್ಲೆಗೆ ಯತ್ನಿಸಿದ್ದು ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಈ ಸಂಬಂಧ ನವೆಂಬರ್ 4ರಂದು ಸಿಂದಗಿ ಠಾಣೆಯಲ್ಲಿ ಕಂಪ್ಲೇಟ್ ನೀಡಲಾಗಿದೆ.

ಈ ವೇಳೆ ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಅಲ್ಲಾಪೂರ, ವರದಿಗಾರರಾದ ಮುರುಗೇಶ ಹಿಟ್ಟಿ, ಪಂಡಿತ ಯಂಪೂರೆ, ರವಿ ಮಲ್ಲೇದ, ನಿಂಗರಾಜ ಅತನೂರು, ಪ್ರಕಾಶ ಬಡಗೇರ, ಅಂಬರೀಶ ಸುಣಗಾರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಸಲೀಂ ಮರ್ತೂರ, ಟಿ.ಕೆ ಮಲಗೊಂಡ ಮೈಹಿಬೂಬ ಮುಲ್ಲಾ, ರಮೇಶ ಪೂಜಾರಿ, ಶಿವಾನಂದ ಬಿರಾದಾರ, ಗುಂಡು ಕುಲ್ಕರ್ಣಿ, ಅಸ್ಪಾಕ ಖರ್ಜಗಿ, ಗಪೂರ ಮುಜಾವರ, ರಫಿಕ, ಸಿದ್ದು ಪೂಜಾರಿ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ರು.

ಓದುಗರ ಗಮನಕ್ಕೆ



Leave a Reply

Your email address will not be published. Required fields are marked *

error: Content is protected !!