ಶಿವಸೇನೆ ಜೊತೆ ದೋಸ್ತಿ ಪ್ರಶ್ನೆಯೇ ಇಲ್ಲ: ಪವಾರ

349

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಶಿವಸೇನೆ ಜೊತೆ ಹೋಗುವ ಪ್ರಶ್ನೆಯೇ ಇಲ್ಲವೆಂದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ ಹೇಳಿದ್ದಾರೆ. ವಿರೋಧ ಪಕ್ಷದಲ್ಲಿ ಕುಳಿತು ನಮ್ಮ ಜವಾಬ್ದಾರಿಯ ಕೆಲಸಗಳನ್ನ ಮಾಡುತ್ತೇವೆ ಅಂತಾ ಹೇಳಿದ್ದಾರೆ.

ಬಿಜೆಪಿ ಮತ್ತು ಶಿವಸೇನೆಗೆ ಜನರು ತೀರ್ಪು ಕೊಟ್ಟಿದ್ದಾರೆ. ಅವರು ಸರ್ಕಾರ ರಚನೆ ಮಾಡಬೇಕು. ನಮ್ಗೆ ಮತ್ತು ಕಾಂಗ್ರೆಸ್ ಗೆ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ತೀರ್ಪು ನೀಡಿದ್ದಾರೆ ಎಂದು ಹೇಳಿದ್ರು. ಬಿಜೆಪಿ ಶಿವಸೇನೆ ಮೈತ್ರಿ ಮಾಡಿಕೊಂಡಿದೆ. ಇಲ್ಲಿ ಎನ್ ಸಿಪಿ ಜೊತೆ ಹೊಂದಾಣಿಕೆ ಪ್ರಶ್ನೆಯೇ ಬರುವುದಿಲ್ಲ. ಕಳೆದ 25 ವರ್ಷಗಳಿಂದ ಜೊತೆಯಲ್ಲಿಯೇ ಇದ್ದಾರೆ. ಇವತ್ತಲ್ಲ ನಾಳೆ ಒಂದಾಗಬಹುದು. ಆದಷ್ಟು ಬೇಗ ಸರ್ಕಾರ ರಚನೆ ಮಾಡಲಿ ಅಂತಾ ಹೇಳಿದ್ರು.

ನಾನು ನಾಲ್ಕು ಬಾರಿ ಮಹಾರಾಷ್ಟ್ರದ ಸಿಎಂ ಆಗಿದ್ದಾನೆ. ಅದರ ಮೇಲೆ ನನ್ಗೆ ಆಸೆಯಿಲ್ಲ. ರಾಷ್ಟ್ರಪತಿ ಆಡಳಿತ ಹೇರುವ ಬದ್ಲು ಬಿಜೆಪಿ ಶಿವಸೇನೆ ಸರ್ಕಾರ ರಚನೆ ಮಾರ್ಗ ಒಂದೇ ಅಂತಾ ಹೇಳಿದ್ರು. ಸಂಜಯ ರಾವತ್ ನನ್ನನ್ನು ಇಂದು ಬೆಳಗ್ಗೆ ಭೇಟಿ ಮಾಡಿ, ಮುಂಬರುವ ಸಂಸತ್ ಅಧಿವೇಶದನ ಕುರಿತು ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ರು ಅಂತಾ ತಿಳಿಸಿದ್ರು.




Leave a Reply

Your email address will not be published. Required fields are marked *

error: Content is protected !!