ಎಲ್ಲೆಡೆ ಕರೋನಾ ಕಾರ್ಮೋಡ.. ಈ ದೇಶಗಳಲ್ಲಿ ಕರೋನಾ ಅಂದ್ರೆ ಗೊತ್ತಿಲ್ಲ..

367

ಇವತ್ತಿನ ಪರಿಸ್ಥಿತಿಯಲ್ಲಿ ಕೋವಿಡ್ 19 ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ದಿನ ಶುರುವಾಗುವುದು ಮುಗಿಯುವುದು ಕರೋನಾ ಸುದ್ದಿಯಿಂದಲೇ ಆಗಿದೆ. ಹೀಗಾಗಿ ಅದೆಷ್ಟೋ ಜನ ಸೂರ್ಯ ಹುಟ್ಟುವುದು, ಮುಳಗುವುದನ್ನ ನೋಡುವುದನ್ನೇ ಮರೆತಿದ್ದಾರೆ. ಆದ್ರೆ, ಭೂಮಂಡಲದ ಕೆಲವು ದೇಶಗಳಲ್ಲಿ ಕರೋನಾ ಅನ್ನೋದು ಊರಿಂದಾಚೆ ಅಂದ್ರೆ ನಂಬೀತಿರಾ?

ಯೆಸ್, ನೀವು ಇಷ್ಟು ದಿನ ಕರೋನಾ ದಾಳಿಗೆ ತುತ್ತಾಗಿರುವ ದೇಶಗಳ ಬಗ್ಗೆ ಓದ್ತಿದ್ದೀರ. ಆದ್ರೆ, ನಾವು ನಿಮ್ಗೆ ಕರೋನಾ ವೈರಸ್ ಕಾಟ ಇಲ್ಲದೆ ನೆಮ್ಮದಿಯಾಗಿ ಜೀವನ ಮಾಡ್ತಿರುವ ದೇಶಗಳ ಬಗ್ಗೆ ಹೇಳ್ತೀವಿ. ಮರಿಲ್ಯಾಂಡ್ ನಲ್ಲಿರುವ ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ಸಿಸ್ಟಮ್ಸ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ನಡೆಸಿರುವ ರಿಸರ್ಚ್ ಪ್ರಕಾರ ಏಷ್ಯ, ಆಫ್ರಿಕಾ ಹಾಗೂ ಓಷಿಯಾನಿಯಾದ 15 ರಾಷ್ಟ್ರಗಳಲ್ಲಿ ಕರೋನಾ ಸೋಂಕಿನ ಬಗ್ಗೆ ಗೊತ್ತೇ ಇಲ್ಲ. ಅಂದ್ರೆ, ಅಲ್ಲಿ ಕೋವಿಡ್ 19 ಸೋಂಕು ಇಲ್ಲ.

ತಜಿಕಿಸ್ತಾನ್, ಉತ್ತರ ಕೋರಿಯಾ, ಟರ್ಕ್ ಮೆನಿಸ್ತಾನ್, ಮಧ್ಯ ಏಷ್ಯಾದ ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್.. ಇನ್ನು ಏಷಿಯಾನದಿಂದ ಮಲನೇಷಿಯಾ, ಮೈಕ್ರೋನೇಷಿಯಾ, ಮ್ಯಾಲಿನೇಷಿಯಾ, ಕಿರಿಬಾಟಿ, ತುವಾಲು, ಟೋಂಗಾ, ಸಮೋವಾ, ನೌರು, ವನವಾಟು, ಮಾರ್ಷಲ್ ದ್ವೀಪ, ಸೊಲೊಮನ್ ದ್ವೀಪಗಳು ಸೇರಿದಂತೆ 15 ರಾಷ್ಟ್ರಗಳಲ್ಲಿ ಕರೋನಾ ಅನ್ನೋದು ಇಲ್ಲ. ಆಫ್ರಿಕಾದ ಲೆಸೊಥೊ ಹಾಗೂ ಕೊಮೊರೊಸ್ ನಾಡಿನಲ್ಲಿ ನೋ ಕರೋನಾ.

ಕರೋನಾ ಮಾಹಿತಿ ಟೇಬಲ್:

ನಂಬರ್ ಪ್ರದೇಶ ಸೋಂಕಿತರು ಸಾವು ಗುಣಮುಖ
01 ಜಗತ್ತು 2,182,823+ 1,45,551+ 5,47,679+
02 ಭಾರತ 13,430 448 1,768
03 ಕರ್ನಾಟಕ 315 13 82

ಇಲ್ಲಿನ ಜನಸಂಖ್ಯೆ ತುಂಬಾ ಕಡಿಮೆ. ಭೌಗೋಳಿಕವಾಗಿ ಸಣ್ಣಪುಟ್ಟ ದೇಶಗಳಾಗಿದ್ದು, ವಿಶ್ವದ ಇತರೆ ರಾಷ್ಟ್ರಗಳೊಂದಿಗೆ ಸಂಪರ್ಕಯಿರುವುದು ತುಂಬಾ ಕಡಿಮೆ. ಕಾರಣ, ಬಹುತೇಕ ದೇಶಗಳು ದ್ವೀಪ ರಾಷ್ಟ್ರಗಳು ಆಗಿರುವುದ್ರಿಂದ ಸುತ್ತಲೂ ಸಮುದ್ರ ಆವರಿಸಿಕೊಂಡಿರುವುದು. ಹೀಗಾಗಿ ಇವರಿಗೆ ಕರೋನಾ ಸೋಂಕಿನ ಭಯವಿಲ್ಲ. ಆದ್ರೆ, ಉತ್ತರ ಕೋರಿಯಾ ಬಗ್ಗೆ ಮಾತ್ರ ಅನುಮಾನವಿದೆ.

ಉತ್ತರ ಕೋರಿಯಾದಲ್ಲಿ ಸರ್ವಾಧಿಕಾರಿ ಆಡಳಿತವಿದೆ. ಕಿಮ್ ಜಂಗ್ ಉನ್ ಇಡೀ ದೇಶವನ್ನ ತನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಂಡಿದ್ದಾನೆ. ಇದು ತನ್ನಲ್ಲಿನ ಯಾವುದೇ ವಿಷಯಗಳನ್ನ ಹೊರ ಜಗತ್ತಿಗೆ ತಿಳಿಸುವುದಿಲ್ಲ. ಹೀಗಾಗಿ ಇಲ್ಲಿ ಕರೋನಾ ಕೇಸ್ ದಾಖಲಾಗಿಲ್ಲ ಅನ್ನೋದರ ಬಗ್ಗೆ ಅನುಮಾನವಿದೆ. ಯಾಕಂದ್ರೆ, ಜನವರಿಯಲ್ಲಿ ಚೀನಾದಿಂದ ಕರೋನಾ ಪರೀಕ್ಷಾ ಕಿಟ್ ಗಳನ್ನ ತರೆಸಿಕೊಂಡು ಸೈಲೆಂಟ್ ಆಗಿ ಉಳಿದಿದೆ. ಒಟ್ಟಿನಲ್ಲಿ ಇಷ್ಟೊಂದು ದೇಶಗಳಲ್ಲಿ ಕರೋನಾ ಇಲ್ಲ ಅನ್ನೋದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!