ನವೆಂಬರ್ 26ರಂದು ಆಟೋ, ಟ್ಯಾಕ್ಸಿ ಚಾಲಕರ ಮುಷ್ಕರ

225

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ, ಟ್ಯಾಕ್ಸಿ ಸಂಘಟನೆಗಳ ಒಟ್ಟು 20 ಒಕ್ಕುಟಗಳು ಸೇರಿ ನವೆಂಬರ್ 26ರಂದು ಮುಷ್ಕರ ನಡೆಸ್ತಿವೆ. ಹೀಗಾಗಿ ಗುರುವಾರ ಬೆಂಗಳೂರು ಸೇರಿದಂತೆ ಇತರೆ ನಗರಗಳಲ್ಲಿ ಆಟೋ, ಟ್ಯಾಕ್ಸಿ ಸೇವೆಯ ಸಮಸ್ಯೆಯಾಗಬಹುದು.

ವಾಹನಗಳ ಸಾಲ ಮನ್ನಾ, ಓಲಾ, ಉಬರ್ ಆ್ಯಪ್ ಆಧಾರಿತಿ ಕಂಪನಿಗಳ ಪೈಪೋಟಿ ತಡೆಗಟ್ಟಬೇಕು. ಕಮಿಷನ್ ವಸೂಲಿಗೆ ತಡೆ ನೀಡಬೇಕು. ವಾಹನಗಳಿಗೆ ಮೀಟರ್ ಅಳವಿಡಸಬೇಕು. ಹೊಸ ಆಟೋ ಖರೀದಿ ತೆರಿಗೆಯನ್ನ ಶೇಕಡ 17ರಿಂದ 5ಕ್ಕೆ ಇಳಿಸಬೇಕು. ಇನ್ನು ಆಟೋ, ಟ್ಯಾಕ್ಸಿ ಚಾಲಕರಿಗೆ ಜಾತಿವಾರು ನಿಗಮ ಮಂಡಳಿಯಿಂದ ಸಾಲ ನೀಡಬೇಕು.

ಆಟೋ ಚಾಲಕರಿಗೆ 1 ಲಕ್ಷ, ಟ್ಯಾಕ್ಸಿ ಚಾಲಕರಿಗೆ 2 ಲಕ್ಷ ಸಾಲ ನೀಡಬೇಕು. ಬಿಡಿಎ ಅಥವ ಗೃಹ ಮಂಡಳಿಯಿಂದ ಮನೆ ಕಟ್ಟಿಸಿಕೊಡಬೇಕು ಅನ್ನೋದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಮುಷ್ಕರ ನಡೆಸಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!