ಪ್ರಜಾಸ್ತ್ರ ಸುದ್ದಿ
ಬಿಂಡ್ಕಿ: ಒಂದು ಆಟೋದಲ್ಲಿ ಅಬ್ಬಾಬ್ಬ ಅಂದರೆ ಐದಾರು ಮಂದಿ ಕುಳಿತುಕೊಳ್ಳಬಹುದು. ಆದರೆ, ಉತ್ತರ ಪ್ರದೇಶದ ಫತ್ತೇಪುರದ ಬಿಂಡ್ಕಿಯಲ್ಲಿ ಬರೋಬ್ಬರಿ 27 ಮಂದಿ ಕುಳಿತುಕೊಂಡು ಹೋಗುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
ಪುಟ್ಟ ಪುಟ್ಟ ಮಕ್ಕಳು ಸೇರಿದಂತೆ ದೊಡ್ಡವರು ಒಬ್ಬೊಬ್ಬರಾಗಿ ಆಟೋದಿಂದ ಇಳಿದು ಬರುವುದನ್ನು ನೋಡಿದರೆ ಇವರು ಎಲ್ಲಿ, ಹೇಗೆ ಕುಳಿತುಕೊಂಡಿದ್ದರು ಅನ್ನೋದೇ ನೋಡುಗರಿಗೆ ತಿಳಿಯದಾಗಿದೆ. ಪೊಲೀಸರು ಆಟೋ ಸೀಜ್ ಮಾಡಿ ಚಾಲಕನಿಗೆ 11,500 ರೂಪಾಯಿ ದಂಡ ಹಾಕಿದ್ದಾರೆ.