ಇಂಟರ್ ನೆಟ್ ಸೇವೆ ಮೂಲಭೂತ ಹಕ್ಕು

327

ನವದೆಹಲಿ: ಪ್ರತಿಯೊಬ್ಬರು ಇಂಟರ್ ನೆಟ್ ಸೇವೆ ಪಡೆಯುವುದು ಸಂವಿಧಾನದ ಪರಿಚ್ಛೇದ 19ರ ಅಡಿಯಲ್ಲಿ ಮೂಲಭೂತ ಹಕ್ಕಾಗಿದೆ. ಇದನ್ನ ನಿರ್ದಿಷ್ಟ ಕಾರಣಗಳಿಗೆ ನಿರ್ಬಂಧ ಹೇರಬಹುದು ಹಾಗೂ ಅದಕ್ಕೊಂದು ಮಿತಿ ಇರುತ್ತೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕಾಣಿವೆ ನಾಡಿನಲ್ಲಿ ಇಂಟರ್ ನೆಟ್ ಸೇವೆ ಬಂದ್ ಮಾಡಿರುವ ಕುರಿತು ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ, ನ್ಯಾಯಮೂರ್ತಿಗಳಾದ ಎನ್.ವಿ ರಮಣ, ಆರ್ ಸುಭಾಷ ರೆಡ್ಡಿ ಹಾಗೂ ಬಿ.ಆರ್ ಗವೈ ಅವರನ್ನೊಳಗೊಂಡ ಪೀಠ ಮಹತ್ವದ ಆದೇಶ ನೀಡಿದೆ. ಅಲ್ದೇ ಇಂಟರ್ ನೆಟ್ ರದ್ದುಗೊಳಿಸಿರುವ ಸಂಬಂಧ 7 ದಿನಗಳೊಳಗೆ ಪರಾಮರ್ಶೆ ಮಾಡಿಸುವಂತೆ ಜಮ್ಮು-ಕಾಶ್ಮೀರ ಆಡಳಿತಕ್ಕೆ ಹೇಳಿದೆ.

ನಿರ್ಬಂಧಿತ ಕಾರಣಗಳಿಗೆ ಅಲ್ಪಾವಧಿವರೆಗೂ ಮಾತ್ರ ಇಂಟರ್ ನೆಟ್ ಸೇವೆ ಬಂದ್ ಮಾಡಬಹುದು. ಅದು ನ್ಯಾಯಾಂಗ ಪರಾಮರ್ಶೆಗೆ ಒಳಪಡುತ್ತದೆ. ಎಲ್ಲ ನಿರ್ಬಂಧ ಆದೇಶಗಳು ಸಾರ್ವಜನಿಕರಿಗೆ ಲಭ್ಯವಿರಬೇಕು. ಇದನ್ನ ಪ್ರಶ್ನಿಸಿ ಕೋರ್ಟ್ ನಲ್ಲಿ ಹೋರಾಟ ನಡೆಸಬಹುದು ಅಂತಾ ಹೇಳಲಾಗಿದೆ.




Leave a Reply

Your email address will not be published. Required fields are marked *

error: Content is protected !!