ಸಂಚಾರಿ ಪೌಷ್ಟಿಕಾಂಶ ರಥಕ್ಕೆ ಚಾಲನೆ

263

ಪ್ರಜಾಸ್ತ್ರ ಸುದ್ದಿ

ನಾಗಮಂಗಲ: ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಪೌಷ್ಟಿಕ ಆಹಾರ ಪ್ರದರ್ಶನ ಶಿಬಿರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಚಾರಿ ಪೌಷ್ಟಿಕಾಂಶ ರಥಕ್ಕೆ ಪ್ರಾಂಶುಪಾಲರಾದ ಡಾ. ಶಿವರಾಮು ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಮನೆಗಳಿಗೆ ಬೇಕಾದ ಸೊಪ್ಪು ತರಕಾರಿ ಹಣ್ಣುಗಳನ್ನು ಜನರೇ ಬೆಳೆಯುತ್ತಿದ್ರು. ಆದ್ರೆ, ಇಂದು ಖರೀದಿಸುವ ಪ್ರವೃತ್ತಿ ಎಲ್ಲಾ ಕಡೆ ಕಂಡುಬರುತ್ತಿರುವುದು ವಿಷಾದನೀಯ ಎಂದರು. ಅಪೌಷ್ಟಿಕತೆ ಹಿಂದಿನಿಂದಲೂ ಇರುವ ಒಂದು ಆರೋಗ್ಯ ಸಮಸ್ಯೆ. ಮುಖ್ಯವಾಗಿ ಮಕ್ಕಳು, ಗರ್ಭಿಣಿ ಹಾಗೂ ಬಾಣತಿಯರಲ್ಲಿ ಅಪೌಷ್ಟಿಕತೆ ಬರೆದಂತೆ ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸಲಹೆ ನೀಡಿದ್ರು.

ಇನ್ನು ಮಹಿಳಾ ಮತ್ತು ಮಕ್ಕಳ ವಿಭಾಗದ ಮೇಲ್ವಿಚಾರಕಿ ದಿವ್ಯ ಮಾತ್ನಾಡಿ, ಅಪೌಷ್ಟಿಕತೆ ತಡೆಗಟ್ಟುವಲ್ಲಿ ನಮ್ಮ ಇಲಾಖೆಯ ಜೊತೆಗೆ ಕೈಜೋಡಿಸಿದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಸಮುದಾಯದ ವೈದ್ಯಕೀಯ ವಿಭಾಗದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇದೆ ಸಂದರ್ಭದಲ್ಲಿ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಬಸವರಾಜ.ಎಂ.ಇಂಗಳಗೇರಿ, ಡಾ.ಶಶಿಕಾಂತ, ಡಾ.ವಸಂತಕುಮಾರ, ಡಾ.ಎಂ.ಶಶಿಕಿರಣ, ಡಾ.ಶೀತಲ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!