ಇದೊಂದು ಬಾಕಿ ಅಂದಿದ್ರಿ.. ಅದನು ನಡೆದು ಹೋಯ್ತು ನೋಡಿ..

435

ತೆಲಂಗಾಣ: ಕರೋನಾ ಭೀತಿ ಎಷ್ಟೊಂದು ಆವರಿಸಿಕೊಂಡಿದೆ ಅಂದ್ರೆ, ಇಡೀ ಜಗತ್ತನ್ನ ಅಲ್ಲೋಲಕಲ್ಲೋಲ ಮಾಡಿದೆ. ಹೀಗಾಗಿ ಜನ ಜೀವನ ಸಾಕಷ್ಟು ಏರುಪೇರಾಗಿದೆ. ಸಾಮೂಹಿಕವಾಗಿ ಜನ ಸೇರುವುದು ಸಂಪೂರ್ಣವಾಗಿ ನಿಂತಿದೆ. ಸಭೆ, ಸಮಾವೇಶಗಳು, ಶುಭ ಸಮಾರಂಭಗಳು ಯಾವುದೂ ನಡೆಯುತ್ತಿಲ್ಲ. ಒಂದು ವೇಳೆ ಮಾಡಿದ್ರೆ ಜನ ಬರ್ತಿಲ್ಲ. ಹೀಗಾಗಿ ಅದೆಷ್ಟೋ ಮದ್ವೆಗಳು ಮುಂದೂಡಿವೆ.

ಆದ್ರೆ, ತೆಲಂಗಾಣದಲ್ಲಿ ಮದುವೆ ಮುಂದೂಡವ ಬದಲು ಆನ್ ಲೈನ್ ಮೂಲಕವೇ ಮುದವೆ ಶಾಸ್ತ್ರ ಮುಗಿಸಲಾಗಿದೆ. ಕೊಟ್ಟಗುಂಡಂ ಜಿಲ್ಲೆ ಗುಂಡಾಲದ ಶೇಖ ಅಬ್ದುಲ ನಬಿ ಎಂಬುವರ ಮಗಳಿಗೂ ಕರೀಂನಗರದ ಮೊಹಮ್ಮದ ಅದ್ನಾನ ಖಾನ ಎಂಬುವವನಿಗೂ ಮದುವೆ ನಿಶ್ಚಿಯವಾಗಿತ್ತು. ವರ ಕಳೆದ ಐದು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡ್ತಿದ್ದಾನೆ. ಈ ವಾರ ತವರಿಗೆ ವಾಪಸ್ ಆಗಬೇಕಿತ್ತು. ಆದ್ರೆ, ಕರೋನಾ ಇದಕ್ಕೆ ಅಡ್ಡಗಾಲು ಹಾಕಿದ ಪರಿಣಾಮ, ಅವನಿಗೆ ಹೈದ್ರಾಬಾದ್ ಗೆ ಬರಲು ಆಗಿಲ್ಲ. ಸೌದಿ ಸರ್ಕಾರ ಪ್ರಯಾಣ ನಿರ್ಬಂಧ ಹೇರಿದ ಪರಿಣಾಮ ವರ ಬಂದಿಲ್ಲ.

ವರನೇ ಇಲ್ಲದೆ ಮದುವೆ ಹೇಗೆ ಮಾಡೋದು ಹೇಗೆ ಎಂದ್ಕೊಂಡ ಕುಟುಂಬಸ್ಥರು, ನಿಶ್ಚಯವಾದ ದಿನಾಂಕ ಮುಂದೂಡವ ಬದಲು ವಿಡಿಯೋ ಕಾಲ್ ಮೂಲಕ ವರ-ವಧು ಕಬೂಲ್ ಎಂದು ಹೇಳುವ ಮೂಲಕ ಸತಿ ಪತಿಯಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮದಲ್ಲಿ ಸುದ್ದಿಯಾಗಿದೆ. ಇದನ್ನ ನೋಡಿದ ಜನ ಇದೊಂದು ಬಾಕಿಯಿತ್ತು. ಇದನೂ ಮುಗಿದು ಹೋಯ್ತು ಅಂತಿದ್ದಾರೆ.

ಓದುಗರ ಗಮನಕ್ಕೆ



Leave a Reply

Your email address will not be published. Required fields are marked *

error: Content is protected !!