ದೇಶದ ಹಿತದೃಷ್ಟಿಯಿಂದ 10 ವಿದೇಯಕ ಜಾರಿಯಾಗಬೇಕಿದೆ

356

ಹುಬ್ಬಳ್ಳಿ: ದೇಶದ ಹಿತದೃಷ್ಟಿಯಿಂದ ಕೆಲ ಪ್ರಮುಖ ವಿಧೇಯಕಗಳು ಜಾರಿಯಾಗಬೇಕಿದೆ. ಹೀಗಾಗಿ ದೇಶದ ಪ್ರಮುಖ ವಿರೋಧ ಪಕ್ಷಗಳ ನಾಯಕರನ್ನ ಭೇಟಿಯಾಗುತ್ತಿದ್ದೇನೆ ಅಂತಾ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಸುಗಮ‌ ಕಲಾಪಕ್ಕೆ ಅವಕಾಶ ಮಾಡಿ ಕೊಡುವ ಸಲುವಾಗಿ ದೇಶದ ನಾಯಕರನ್ನ ಭೇಟಿಯಾಗಿ ಮನವಿ ಮಾಡ್ತಿದ್ದೇವೆ ಅಂತಾ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ  ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೇಶದ ಹಿತ ದೃಷ್ಟಿಯಿಂದ 10 ಕ್ಕೂ ಹೆಚ್ಚು ವಿಧೇಯಕಗಳು ಮಂಡನೆ ಮಾಡಬೇಕಾಗಿದೆ. ಈ ಬಗೆಯ ಚರ್ಚೆಗೆ ಸರ್ಕಾರ ಸಿದ್ಧವಿದೆ. ಹೀಗಾಗಿ ಕಲಾಪವನ್ನ ಸುಗಮವಾಗಿ ನಡೆಸಲು ವಿರೋಧ ಪಕ್ಷಗಳು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡಗಳು ಬರಲಿವೆ. ಅಧ್ಯಯನದ ನಂತರ ಕೇಂದ್ರ ಸರ್ಕಾರ ಸ್ಪಂದಿಸಲಿದೆ. ಆದರೆ ರಾಜ್ಯದ ಮುಖ್ಯಮಂತ್ರಿ ಬರ ಅಧ್ಯಯನ ಮಾಡುವುದನ್ನ ಬಿಟ್ಟು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಸರಿಯಲ್ಲ ಅಂತಾ ವಾಗ್ದಾಳಿ ನಡೆಸಿದ್ರು. ಜಿಂದಾಲ್ ಗೆ ಭೂಮಿ ನೀಡುವ ನಿರ್ಧಾರವನ್ನ ಕಾಂಗ್ರೆಸ್ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಜೆಪಿ ಹೋರಾಟ ಮಾಡುತ್ತೆ ಅಂತಾ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ರು.


TAG


Leave a Reply

Your email address will not be published. Required fields are marked *

error: Content is protected !!