ಮೂರನೇ ಮದುವೆಗೆ ಸಜ್ಜಾದರಾ ಪವಿತ್ರಾ ಲೋಕೇಶ್?

257

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟಿ ಪವಿತ್ರಾ ಲೋಕೇಶ್ ಮದುವೆ ವಿಚಾರ ಸ್ಯಾಂಡಲ್ ವುಡ್ ಹಾಗೂ ಕಾಲಿವುಡ್ ಅಂಗಳದಲ್ಲಿ ಜೋರಾಗಿ ಓಡಾಡುತ್ತಿದೆ. ಯಾಕಂದರೆ, ಪವಿತ್ರಾ ಲೋಕೇಶ್ ಕನ್ನಡದ ನಟಿಯಾದರೂ ತೆಲುಗು ಸಿನಿಮಾ ರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ. ಅದೆ ಸಿನಿಮಾರಂಗದ ನಟರೊಂದಿಗೆ ಮದುವೆಗೆ ಸಜ್ಜಾಗಿದ್ದಾರೆ ಅನ್ನೋ ಚರ್ಚೆ ನಡೆದಿದೆ.

ಪವಿತ್ರಾ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್

2007ರಲ್ಲಿ ನಟಿ ಪವಿತ್ರಾ ಲೋಕೇಶ್ ಹಾಗೂ ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರ ಮದುವೆಯಾಯಿತು. ಆಗ ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಇದೀಗ ಇಬ್ಬರು ಜೊತೆಯಾಗಿಲ್ಲ. ವೈವಾಹಿಕ ಜೀವನ ಸರಿಯಾಗಿಲ್ಲ ಅನ್ನೋ ಸುದ್ದಿಯ ಜೊತೆಗೆ ತೆಲುಗು ನಟ ನರೇಶ್ ಜೊತೆ ಮದುವೆಯಾಗಲಿದ್ದಾರೆ ಅಂತೆ. ಇದಕ್ಕಾಗಿ ಮಹಾಬಲೇಶ್ವರಕ್ಕೆ ಹೋಗಿ ಬಂದಿದ್ದಾರಂತೆ.

ನರೇಶ್ ಹಾಗೂ ಪವಿತ್ರಾ ಲೋಕೇಶ್

ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೊತೆಗೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಿವ್ ಇನ್ ರಿಲೇಷನ್ ಶಿಪ್ ಇತ್ತು ಎಂದು ಸಹ ಮಾತುಗಳು ಕೇಳಿ ಬಂದಿವೆ. ಇದೀಗ ಮದುವೆಯಾಗಲು ಸಿದ್ಧವಾಗಿದ್ದಾರೆ ಎನ್ನಲಾಗುತ್ತಿದ್ದು, ಶೀಘ್ರದಲ್ಲಿ ಇದಕ್ಕೆ ಉತ್ತರ ಸಿಗಲಿದೆ. ಒಂದು ವೇಳೆ ನರೇಶ್, ಪವಿತ್ರಾ ಲೋಕೇಶ್ ಮದುವೆಯಾದರೆ, ನರೇಶಗೆ 4ನೇ ಮದುವೆ, ಪವಿತ್ರಾಗೆ 3ನೇ ಮದುವೆಯಾಗಿರಲಿದೆ.




Leave a Reply

Your email address will not be published. Required fields are marked *

error: Content is protected !!