ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕನ್ನಡ ಮೂಲದ ನಟಿ ಪವಿತ್ರಾ ಲೋಕೇಶ್ ಹೆಚ್ಚು ಜನಪ್ರಿಯತೆ ಪಡೆದಿದ್ದು ತೆಲುಗು ಸಿನಿ ದುನಿಯಾದಲ್ಲಿ. ಕನ್ನಡದಲ್ಲಿಯೂ ಸಾಕಷ್ಟು ಚಿತ್ರಗಳಲ್ಲಿ ಮಿಂಚಿದ ನಟಿ, ಮುಂದೆ ಗಟ್ಟಿಯಾಗಿ ನಿಂತಿದ್ದು ತೆಲುಗು, ತಮಿಳು ಚಿತ್ರರಂಗದಲ್ಲಿ. ಇಂತಹ ನಟಿ ಹಾಗೂ ತೆಲುಗು ನಟ ನರೇಶ್ ನಡುವಿನ ಸಂಬಂಧದ ಬಗ್ಗೆ ಕೆಲ ತಿಂಗಳ ಹಿಂದೆ ದೊಡ್ಡ ಸುದ್ದಿ ಆಯಿತು.
ನರೇಶ್ ಪತ್ನಿ, ಇವರಿಬ್ಬರ ಸಂಬಂಧದ ಬಗ್ಗೆ ಮೀಡಿಯಾದ ಎದುರು ಹೇಳುವ ಮೂಲಕ ತಮಗೆ ಅನ್ಯಾಯವಾಗುತ್ತಿದೆ ಎಂದಿದ್ದರು. ಆಗ ಈ ಜೋಡಿ ನಮ್ಮದು ಸ್ನೇಹ. ಬೇರೆ ರೀತಿಯ ಸಂಬಂಧವಿಲ್ಲ ಎಂದಿದ್ದರು. ಈಗ ನೋಡಿದರೆ ಸಣ್ಣದೊಂದು ವಿಡಿಯೋ ಮೂಲಕ ಶೀಘ್ರದಲ್ಲಿ ಮದುವೆಯಾಗುತ್ತೇವೆ ಎಂದು ಘೋಷಿಸಿದ್ದಾರೆ.
ಹೊಸ ವರ್ಷದ ಶುಭಾಶಾಯ ಕೋರಿರುವ ಜೋಡಿ ಲಿಪ್ ಕಿಸ್ ಮಾಡುವ ಮೂಲಕ, ಮದುವೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೆ ಮಾತನ್ನು ಅಂದೆ ಹೇಳಿದ್ದರೆ ಇಷ್ಟೊಂದು ಯಾಕೆ ಗಲಾಟೆ ಆಗುತಿತ್ತು. ಅಂದು ಯಾವುದೇ ಸಂಬಂಧವಿಲ್ಲವೆಂದು ಈಗ ಮದುವೆ ಅಂತಿದ್ದಾರೆ ಎಂದು ಅನೇಕರು ಟೀಕಿಸಿದ್ದಾರೆ.