ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಮೈಸೂರು: ಕನ್ನಡ ಮೂಲದ ನಟಿ ಪವಿತ್ರಾ ಲೋಕೇಶ್ ಸಖತ್ ಮಿಂಚಿದ್ದು ಸೌಥ್ ಸಿನಿ ದುನಿಯಾದಲ್ಲಿ. ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ಸಾಕಷ್ಟು ಬ್ಯುಸಿ ಇದ್ದಾರೆ. ಇದರ ನಡುವೆ ಪವಿತ್ರಾ ಲೋಕೇಶ್ 3ನೇ ಮದುವೆಯಾಗುತ್ತಿದ್ದಾರೆ ಎಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಈ ಬಗ್ಗೆ ನಟಿ ಮೈಸೂರಿನಲ್ಲಿ ಸೈಬರ್ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ದೂರು ನೀಡಿದ್ದಾರೆ.
ತಮ್ಮ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ತೆರೆದು ಅಶ್ಲೀಲ ಮೆಸೇಜ್ ಕಳುಸುತ್ತಿದ್ದಾನಂತೆ. ತಮ್ಮ ಹೆಸರಿಗೆ ಕಳಂಕ ತರುವ ಕೆಲಸ ಮಾಡಲಾಗಿದೆ. ಅಲ್ಲದೆ 3ನೇ ಮದುವೆಯಾಗುತ್ತಿದ್ದಾರೆ ಅನ್ನೋ ಕುರಿತು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ನಟಿ ದೂರು ನೀಡಿದ್ದಾರೆ. ಇದೀಗ ನಕಲಿ ಖಾತೆ ಸೃಷ್ಟಿಸಿದವನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.