ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದ ಜನತೆ

944

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಅಪಾರ ಪ್ರಮಾಣದ ಬೆಂಗಲ ವ್ಯಕ್ತವಾಗಿದೆ. ದೇಶದಾದ್ಯಂತ ಜನತೆ ಹೊರ ಬರೆದೆ ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಇಡೀ ದೇಶದಲ್ಲಿ ಇಂದು ಎಲ್ಲಿ ನೋಡಿದ್ರೂ ಬಣಬಣ ಅನ್ನೋ ವಾತಾವರಣ ನಿರ್ಮಾಣವಾಗಿತ್ತು.

ಸಿಂದಗಿ ಪಟ್ಟಣದ ಕನಕದಾಸ ಸರ್ಕಲ್ ಬಳಿಯಿರುವ ಮಲ್ಲು ಹಿರೋಳ್ಳಿ ಕುಟುಂಬಸ್ಥರು ಹಾಗೂ ಸ್ನೇಹಿತರು ಚಪ್ಪಾಳೆ ತಟ್ಟುವ ಮೂಲಕ ಕರೋನಾ ವಿರುದ್ಧ ಸತತ ಸೇವೆ ಸಲ್ಲಿಸ್ತಿರುವವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ರಾಜ್ಯದ ಎಲ್ಲ ಭಾಗದಲ್ಲಿಯೂ ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದು, ಇದೀಗ ಜನರು ಮನೆಯಿಂದ ಹೊರ ಬಂದು ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಪ್ರತಿಯೊಬ್ಬರು ವೈದ್ಯರು, ನರ್ಸ್, ಪೌರ ಕಾರ್ಮಿಕರು, ಮಾಧ್ಯಮದವರು, ಪೊಲೀಸ್ರು, ಸಾರಿಗೆ ಸೇವಕರು ಸೇರಿದಂತೆ ಕರೋನಾ ವಿರುದ್ಧ ಹೋರಾಡುವಲ್ಲಿ ದಿನದ 24 ಗಂಟೆಯೂ ಸೇವೆ ಸಲ್ಲಿಸ್ತಿರುವ ಈ ಎಲ್ಲ ವಲಯದ ಜನತೆಗೆ ಧನ್ಯವಾದಗಳನ್ನ ಸಲ್ಲಿಸಲಾಗಿದೆ.

ಧಾರವಾಡದಲ್ಲಿಯೂ ಜನತೆ ಗಂಟೆ, ಜಾಗಟೆ ಬಾರಿಸುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಧಾರವಾಡದ ಶ್ರೀನಗರದಲ್ಲಿರುವ ಜನತೆ ಸಹ ಬೆಂಬಲ ಸೂಚಿಸಿದ್ದಾರೆ. ಬಸವರಾಜ ಸುಂಕದ ಕುಟುಂಬಸ್ಥರು ಗಂಟೆ, ಜಾಗಟೆ ಬಾರಿಸುವ ಮೂಲಕ ಪ್ರಧಾನಿ ಮೋದಿ ಕರೆಗೆ ಬೆಂಬಲ ಸೂಚಿಸಿದ್ದಾರೆ.

ಇನ್ನು ಸಿಂದಗಿಯಲ್ಲಿ ಮಲ್ಲು ಭಜಂತ್ರಿ ಕುಟುಂಬದಲ್ಲಿಯೂ ತಟ್ಟೆ ಬರಿಸುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಪಿಎಂ ಜನತಾ ಕರ್ಫ್ಯೂಗೆ ಸಾಥ್ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!