ಸಿಂದಗಿಯಲ್ಲಿ ಫೋಟೋಗ್ರಾಫರ್ಸ್ ಕಾರ್ಯಾಗಾರ

383

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಸಂಗಮೇಶ್ವರ ದೇವಸ್ಥಾನದಲ್ಲಿ ಗುರುವಾರ ಸಂಜೆ ಸೇವಾಲಾಲ್ ಕಲರ್ ಲ್ಯಾಬ್ ಸಹಯೋಗದಲ್ಲಿ ಫಿಲ್ಮಿ ಎಡಿಟ್ ವತಿಯಿಂದ ಫೋಟೋಗ್ರಾಫರ್ ಗಳಿಗೆ ಒಂದು ದಿನದ ಕಾರ್ಯಾಗಾರ ನಡೆಸಲಾಯಿತು. ಆನ್ಲೈನ್ ಮೂಲಕ ಆಹ್ವಾನ ಪತ್ರಿಕೆಯ ಫೋಟೋ, ವಿಡಿಯೋಗೆ ಸಂಬಂಧಿಸಿದಂತೆ ಡೆಮೋ ನೀಡಲಾಯಿತು.

ಫಿಲ್ಮಿ ಎಡಿಟ್ ವೆಬ್ ಸೈಟ್ ಮೂಲಕ ನಿಮಗೆ ಇಷ್ಟವಾದ ರೀತಿಯಲ್ಲಿ ಫೋಟೋ, ವಿಡಿಯೋವನ್ನು ಆನ್ಲೈನ್ ಮೂಲಕ ಎಡಿಟ್ ಮಾಡಿಸಿಕೊಳ್ಳಬಹುದು. ಈ ಆಪ್ ನೊಂದಿಗೆ ಫೋಟೋಗ್ರಾಫರ್ ಗಳು ಕಾರ್ಯನಿರ್ವಹಿಸುವ ಮೂಲಕ ಹೆಚ್ಚಿನ ಆದಾಯ ಪಡೆಯಬಹುದು ಎಂದು ಕೃಷ್ಣ ಎಂಬುವರು ಡೆಮೋ ನೀಡುವ ವೇಳೆ ತಿಳಿಸಿದರು.

ಈ ವೇಳೆ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಛಾಯಾಗ್ರಹಕರು ಭಾಗವಹಿಸಿದ್ದರು. ಈ ಆಪ್ ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ 9964648884 ಈ ನಂಬರ್ ಗೆ ಸಂಪರ್ಕಿಸಬಹುದು. ಜೊತೆಗೆ https://FilmyEdit.com ಆಪ್ ಗೆ ಭೇಟಿ ಕೊಡಬಹುದು.




Leave a Reply

Your email address will not be published. Required fields are marked *

error: Content is protected !!