ಲಾಕ್ ಡೌನ್ ಮುಂದುವರಿಕೆಗೆ ಮನವಿ.. ಪಿಎಂ ಸಂಜೆ ಘೋಷಣೆ ಸಾಧ್ಯತೆ

373

ನವದೆಹಲಿ: ಡೆಡ್ಲಿ ಕರೋನಾದಿಂದಾಗಿ ದೇಶದ ಜನತೆ ಹೈರಾಣಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದೆ. ಹೀಗಾಗಿ ಏಪ್ರಿಲ್ 14ರ ನಂತರವೂ ಲಾಕ್ ಡೌನ್ ಮುಂದುವರೆಸಬೇಕು ಅನ್ನೋ ಅಭಿಪ್ರಾಯವನ್ನ ಎಲ್ಲ ರಾಜ್ಯಗಳ ಸಿಎಂಗಳು ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಜೊತೆಗೆ ನಡೆದ ಸಿಎಂಗಳ ವಿಡಿಯೋ ಕಾನ್ಫರೆನ್ಸ್ ವೇಳೆ ಪಿಎಂ ಬಳಿ ಲೌಕ್ ಡೌನ್ ಮುಂದುವರಿಕೆಗೆ ಮನವಿ ಮಾಡಿದ್ದಾರೆ. ಇದರ ಜೊತೆಗೆ ಕಠಿಣ ಕ್ರಮದ ಅವಶ್ಯಕತೆ ಇದೆಯೆ ಅನ್ನೋದರ ಚರ್ಚೆ ಸಹ ಆಗಿದೆ. ಯಾವ ರಾಜ್ಯಗಳಲ್ಲಿ ಲೌಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಿಲ್ಲವೋ ಅಲ್ಲಿ ಕಠಿಣ ಕ್ರಮಕ್ಕೆ ಸಿದ್ಧತೆಗೆ ಚಿಂತನೆ ನಡೆದಿದೆ.

11ಕ್ಕೂ ಹೆಚ್ಚು ರಾಜ್ಯಗಳ ಸಿಎಂಗಳು ಲಾಕ್ ಡೌನ್ ಮುಂದುವರಿಕೆಗೆ ಮನವಿ ಮಾಡಲಾಗಿದೆ. ಅಲ್ದೇ, ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಎಂದು ಕೇಳಿಕೊಂಡಿದ್ದಾರೆ. ಹೀಗಾಗಿ ಇಂದು ಸಂಜೆ ಪ್ರಧಾನಿ ಮೋದಿ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ. ಸಾರ್ವಜನಿಕರು ಮಾಡಿಕೊಳ್ತಿರುವ ಯಡವಟ್ಟುಗಳಿಂದ ಲಾಕ್ ಡೌನ್ ಮುಂದುವರಿಕೆ ಸ್ಥಿತಿ ಬಂದಿದೆ. ಕೆಲವು ಕಡೆ ಸೀಲ್ ಡೌನ್ ಬಂದಿದೆ. ಈಗ್ಲಾದ್ರೂ ಜನರು ಅರ್ಥ ಮಾಡಿಕೊಳ್ಳಬೇಕಿದೆ.




Leave a Reply

Your email address will not be published. Required fields are marked *

error: Content is protected !!