ಜನರ ಮನವಿಗೆ ಸ್ಪಂದಿಸುವ ಪ್ರಧಾನಿ ಇವುಗಳಿಗೂ ಸ್ಪಂದಿಸಲು ಜನರ ಮನವಿ

266

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಾರ್ವಜನಿಕರಿಂದ ಬಂದ ಸಾಕಷ್ಟು ಮನವಿಯಿಂದಾಗಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಪ್ರಧಾನಿ ಮೋದಿ, ಶುಕ್ರವಾರ ಘೋಷಿಸಿದ್ದಾರೆ. ಇದು ಇದೀಗ ದೇಶದ ತುಂಬಾ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕರು ಪ್ರಧಾನಿ ಮೋದಿ ಬಳಿ ತಮ್ಮ ಮನವಿ ಮಾಡಿಕೊಂಡಿದ್ದಾರೆ.

ಜನರ ಮನವಿಗೆ ಸ್ಪಂದಿಸುವ ಪ್ರಧಾನಿ ಮೋದಿ ಅವರೆ, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಸೇರಿದಂತೆ ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನ ಕಡಿಮೆ ಮಾಡಿದೆ. ದುಬಾರಿಯಾದ ಜಿಎಸ್ ಟಿಯನ್ನ ತೆಗೆದು ಹಾಕಿ. ನಿರುದ್ಯೋಗ ಸಮಸ್ಯೆಯನ್ನ ಬಗೆಹರಿಸಿ, ನೆಲ ಕಚ್ಚಿಹೋಗಿರುವ ಆರ್ಥಿಕತೆ ಮೇಲೆತ್ತಿ, ರಾಷ್ಟ್ರೀಯ ಸಂಸ್ಥೆಗಳ ಖಾಸಗೀಕರಣ ನಿಲ್ಲಿಸಿ. ಕೃಷಿ ಕಾನೂನು ವಿರೋಧಿ ಹೋರಾಟ ಮಾಡ್ತಿರುವ ರೈತರ ಮನವಿಗೆ ಸ್ಪಂದಿಸಿ ಎಂದಿದ್ದಾರೆ.

ಇದರ ಜೊತೆಗೆ ಪೆಗಾಸಸ್ ಹಗರಣ, ರಫೇಲ್ ಹಗರಣ, ಪುಲ್ವಾಮಾ ದಾಳಿಯ ತನಿಖೆ ಸೇರಿದಂತೆ ಕ್ರೀಡಾಂಗಣಗಳಿಗೆ ಇಟ್ಟಿರುವ ಮೋದಿ, ಅರುಣ ಜೇಟ್ಲಿ ಹೆಸರು ಬದಲಾವಣೆ ಮಾಡಲಿ ಎಂದು ಫೇಸ್ ಬುಕ್, ಟ್ವೀಟರ್, ಇನ್ಸ್ ಟಾಗ್ರಾಮ್, ವಾಟ್ಸಪ್ ಸೇರಿದಂತೆ ಎಲ್ಲೆಡೆ ತಮ್ಮ ಮನವಿ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!