ಕಳಪೆ ರಸ್ತೆ ಕಾಮಗಾರಿ: ಸುದ್ದಿಯಿಂದ ಎಚ್ಚೆತ್ತುಕೊಂಡ ದೇ.ಹಿಪ್ಪರಗಿ ಶಾಸಕರು

439

ದೇವರಹಿಪ್ಪರಗಿ: ತಾಲೂಕಿನ ಮತಕ್ಷೇತ್ರದ ಸಾತಿಹಾಳ ದೋಣಿಯಿಂದ ಬಿಜಾಪುರ ಹಳ್ಳದವರೆಗೆ 4 ಕಿಲೋ ಮೀಟರ್ ನಡೆದ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರ ಆರೋಪ ಮಾಡಿದ್ರು. ರಸ್ತೆ ಕೆಲಸ ಮಾಡಿ 15 ದಿನಗಳು ಆಗಿಲ್ಲ. ಆಗ್ಲೇ ಕಿತ್ತುಕೊಂಡು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಈ ಬಗ್ಗೆ ‘ಪ್ರಜಾಸ್ತ್ರ’ದಲ್ಲಿ ಸುದ್ದಿ ಮಾಡಲಾಗಿತ್ತು.

ಸುದ್ದಿಯಿಂದ ಎಚ್ಚೆತ್ತುಕೊಂಡಿರುವ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಅವರು, ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಮರು ನಿರ್ಮಾಣಕ್ಕೆ ಸೂಚಿಸಿದ್ದಾರೆ. ಹೀಗಾಗಿ ಈಗಾಗ್ಲೇ ರಸ್ತೆ ಅಗೆಯುವ ಕೆಲಸ ಮಾಡಲಾಗ್ತಿದೆ. ಈ ವೇಳೆ ಮಾತ್ನಾಡಿದ ಶಾಸಕರು, ಈ ರೀತಿ ಕಳಪೆ ರಸ್ತೆ ಮಾಡುವುದ್ರಿಂದ ನಮಗೂ ಹಾಗೂ ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತೆ. ಹೀಗಾಗಿ ಉತ್ತಮ ರಸ್ತೆ ನಿರ್ಮಿಸಿಯೆಂದು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.

ಸುಮಾರು 4 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಗೆ ಇಬ್ಬರು ಗುತ್ತಿಗೆದಾರರಿದ್ದಾರೆ. ಅದರಲ್ಲೂ ಸಾತಿಹಾಳ ದೋಣಿಯಿಂದ ವಾಟರ್ ಟ್ಯಾಂಕ್ ದವರಿಗಿನ ರಸ್ತೆ ತುಂಬಾ ಕಳಪೆ ಮಟ್ಟದ್ದಾಗಿದೆ. ಲಾಕ್ ಡೌನ್ ಸಮಯದಲ್ಲಿ ತರಾತುರಿಯಲ್ಲಿ ರಸ್ತೆ ನಿರ್ಮಿಸಿ ಗುತ್ತಿಗೆದಾರರು ಬಿಲ್ ಎತ್ತುವ ಹುನ್ನಾರ ನಡೆದಿದೆ ಎಂದು ಆರೋಪಿಸಿದ್ರು. ಸುದ್ದಿಗೆ ಸ್ಪಂದಿಸಿ ಶಾಸಕರು ರಸ್ತೆ ಮರುನಿರ್ಮಾಣಕ್ಕೆ ಮುಂದಾಗಿರುವುದು ಗ್ರಾಮಸ್ಥರಿಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!