ಪ್ರಜಾಸ್ತ್ರ ಸುದ್ದಿ
ನವದೆಹಲಿ: ದೇಶದಲ್ಲಿ ಕರೋನಾ ಲಸಿಕೆ ಕೊರತೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಟೀಕಿಸುವ ಪೋಸ್ಟರ್ ಗಳ ವಿಚಾರವಾಗಿ 12ಕ್ಕೂ ಹೆಚ್ಚು ಜನರನ್ನ ದೆಹಲಿಯಲ್ಲಿ ಬಂಧಿಸಲಾಗಿದೆ. ಈ ವಿಚಾರವಾಗಿ ಸಂಸದ ರಾಹುಲ ಗಾಂಧಿ ಕಿಡಿ ಕಾರಿದ್ದು, ನನ್ನನ್ನು ಬಂಧಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಮೋದಿಜಿ ನೀವು ನಮ್ಮ ಮಕ್ಕಳಿಗೆ ಮೀಸಲಾದ ಲಸಿಕೆಯನ್ನ ವಿದೇಶಕ್ಕೆ ಕಳುಹಿಸಿದ್ದೀರಿ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ. ಬಂಧಿಸಲಾಗಿರುವ 12ಕ್ಕೂ ಹೆಚ್ಚು ಜನರಲ್ಲಿ ದಿನಗೂಲಿಗಳು, ಆಟೋ ಚಾಲಕರು ಸೇರಿ ವಿವಿಧ ಕಡೆ ಕೆಲಸ ಮಾಡುವವರಾಗಿದ್ದಾರೆ. ಇದನ್ನ ಖಂಡಿಸಿರುವ ರಾಹುಲ ಗಾಂಧಿ ಅರೆಸ್ಟ್ ಮಿ ಟು ಎಂದಿದ್ದಾರೆ.