ರಾಹುಲ ದ್ರಾವಿಡ್ ಎನ್ ಸಿಎ ಅಧ್ಯಕ್ಷ

359

ಬೆಂಗಳೂರು: ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರನ್ನಾಗಿ ಇಂಡಿಯನ್ ಕ್ರಿಕೆಟ್ ಟೀಂನ ಮಾಜಿ ನಾಯಕ ರಾಹುಲ ದ್ರಾವಿಡ್ ಅವರನ್ನ ಬಿಸಿಸಿಐ ನೇಮಕ ಮಾಡಿದೆ. ಜುಲೈ 1ರಿಂದಲೇ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಆದ್ರೆ, ಇಂಡಿಯಾ ಸೀಮೆಂಟ್ಸ್ ಉಪಾಧ್ಯಕ್ಷರಾಗಿದ್ದ ಕಾರಣಕ್ಕೆ ಅವರು ಈ ಅಧಿಕಾರ ವಹಿಸಿಕೊಂಡಿರ್ಲಿಲ್ಲ.

ಏಕಕಾದಲ್ಲಿ ಎರಡೆರಡು ಹುದ್ದೆಯಲ್ಲಿ ಕಾರ್ಯನಿರ್ವಹಿಸುವುದು ತೊಡಕಾದ ಕಾರಣಕ್ಕೆ, ಎನ್ ಸಿಎ ಅಧ್ಯಕ್ಷ ಹುದ್ದೆಯ ಅವಧಿ ಮುಗಿಯುವ ತನಕ ಇಂಡಿಯಾ ಸೀಮೆಂಟ್ಸ್ ನ ಉಪಾಧ್ಯಕ್ಷ ಸ್ಥಾನದಿಂದ ತಾವು ರಜೆಯಲ್ಲಿ ಇರೋದಾಗಿ ಹೇಳಿದ್ದಾರೆ. ಹೀಗಾಗಿ ಅವರ ತೊಡಕು ಇದೀಗ ಬಗೆಹರಿದಂತಾಗಿದೆ. ಭಾರತ ಎ ತಂಡ, ಅಂಡರ್ 19, ಇಂಡಿಯಾ ಅಂಡರ್ 23 ಹಾಗೂ ಪುರುಷ ಮತ್ತು ಮಹಿಳಾ ರಾಷ್ಟ್ರೀಯ ತಂಡಗಳ ಕೋಚ್ ಗಳೊಡನೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.




Leave a Reply

Your email address will not be published. Required fields are marked *

error: Content is protected !!