ಸಿಂದಗಿ, ಆಲಮೇಲ ಸುತ್ತಮುತ್ತ ಮಳೆ

468

ಆಲಮೇಲ/ಸಿಂದಗಿ: ವಿಜಯಪುರ ಜಿಲ್ಲೆಯ ನೂತನ ತಾಲೂಕು ಆಲಮೇಲ ಪಟ್ಟಣ ಸೇರಿದಂತೆ ಸುತ್ತಮುತ್ತ ಭಾಗದಲ್ಲಿ ಗುಡುಗು ಸಹಿತಿ ಮಳೆಯಾಗಿದೆ. ಬಿಸಿಲಿನಿಂದ ಹೈರಾಣದ ಜನಕ್ಕೆ ರಾತ್ರಿ ಸುರಿದ ಮಳೆಯಿಂದಾಗಿ ಒಂದಿಷ್ಟು ತಂಪನ್ನೆರದಿದೆ. ಹೀಗಾಗಿ ಈ ಭಾಗದ ಜನರು ಸಂತಸ ವ್ಯಕ್ತಪಡಿಸ್ತಿದ್ದಾರೆ.

ಇನ್ನು ಸಿಂದಗಿ ಪಟ್ಟಣದಲ್ಲಿಯೂ ತುಂತುರು ಮಳೆ ಶುರುವಾಗಿದೆ. ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಮಳೆಯ ಸಿಂಚನವಾಗಿದ್ದು, ಶಕೆಯಿಂದ ಸುಸ್ತಾದ ಜನರಿಗೆ ಈ ಮಳೆ ಸ್ವಲ್ಪ ಸಮಾಧಾನ ತಂದಿದೆ. ಯುಗಾದಿ ಪೂರ್ವದಲ್ಲಿ ಬರುವ ಮಳೆ ಧರೆಯನ್ನ ಒಂದಿಷ್ಟು ತಂಪು ಮಾಡಲಿದೆ. ಹೀಗಾಗಿ ಜನರು ಸಹ ವರುಣದೇವ ಸ್ವಲ್ಪ ಕರುಣೆ ತೋರಲಿ ಅನ್ನುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!