ಆರ್ ಸಿಬಿಗೆ ಚಾಂಪಿಯನ್ ಪಟ್ಟ

378

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕೋವಿಡ್ ಹಾವಳಿಯಿಂದಾಗಿ ಐಪಿಎಲ್ 14ನೇ ಆವೃತ್ತಿ ಅರ್ಧಕ್ಕೆ ನಿಂತಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಇದರ ನಡುವೆ ಆರ್ ಸಿಬಿ ಅಭಿಮಾನಿಗಳಿಗೆ ಖುಷಿಯಾಗುವ ಸುದ್ದಿಯೊಂದು ಹೊರ ಬಿದ್ದಿದೆ. 2009, 2011, 2016ರಲ್ಲಿ ಫೈನಲ್ ಗೆ ಬಂದು ಸೋತು ರನ್ನರ್ ಅಪ್ ಆಗಿದ್ದ ಆರ್ ಸಿಬಿ 2021ರಲ್ಲಿ ಚಾಂಪಿಯನ್ ಅನ್ನೋ ಫಲಿತಾಂಶ ಬಂದಿದೆ.

ಪೈಥಾನ್ ಸಿಮ್ಯೂಲೇಷನ್ ಪ್ರೋಗ್ರಾಮ್ ಮೂಲಕ ಡೆಲ್ಲಿ ವಿರುದ್ಧ ಬೆಂಗಳೂರು ಗೆಲುವು ಸಾಧಿಸಿ ಚಾಂಪಿಯನ್ ಆಗಿದೆ. ಮೊದಲ ಕ್ವಾಲಿಫೈಯರ್ ನಲ್ಲಿ ಆರ್ ಸಿಬಿ ಹಾಗೂ ಡೆಲ್ಲಿ, ಎಲಿಮಿನೇಟರ್ ನಲ್ಲಿ ಚೆನ್ನೈ-ಪಂಜಾಬ್ ತಂಡ ಮುಖಾಮುಖಿಯಾಗಿವೆ. ಕ್ವಾಲಿಫೈಯರ್ 2ರಲ್ಲಿ ಡೆಲ್ಲಿ-ಪಂಜಾಬ್ ಆಡಿವೆ. ಫೈನಲ್ ನಲ್ಲಿ ಡೆಲ್ಲಿ-ಬೆಂಗಳೂರು ಆಡಿದ್ದು, ಬೆಂಗಳೂರು ಗೆಲುವು ಸಾಧಿಸಿದೆ.

ಏನಿದು ಪೈಥಾನ್ ಸಿಮ್ಯೂಲೇಷನ್ ಪ್ರೋಗ್ರಾಮ್?

ರೆಡ್ಡಿಟ್ ನ ಆದಿಶ ಜೈನ್ ಎಂಬುವರು ಪೈಥಾನ್ ಸಿಮ್ಯೂಲೇಷನ್ ಪ್ರೋಗ್ರಾಮ್ ಮಾಡಿದ್ದಾರೆ. ಇದರಲ್ಲಿ ಕಳೆದ 5 ವರ್ಷಗಳ ಪ್ರತಿ ಎಸೆತಗಳ ಅಂಕಿಅಂಶ, ಪ್ರತಿ ಆಟಗಾರನಿಗೆ ವಿಶೇಷ ಗುರುತು, ಸಿಂಗಲ್, ಡಬಲ್ಸ್, ಬೌಂಡರಿ ಗಳಿಸಿದ ಮಾದರಿ ಹಾಗೂ ಔಟ್ ಆದ ರೀತಿ ಬಳಿಸಿಕೊಂಡು ಫಲಿತಾಂಶ ನೀಡಲಾಗಿದೆ. ಈ ಮೂಲಕ ಆರ್ ಸಿಬಿ ಫೈನಲ್ ನಲ್ಲಿ ಡೆಲ್ಲಿ ವಿರುದ್ಧ ಗೆದ್ದಿದೆ.




Leave a Reply

Your email address will not be published. Required fields are marked *

error: Content is protected !!