ಡಾ.ಭಿಕುರಾಮ್ ಇದಾತೆ ವರದಿ ಜಾರಿಗೆ ತರಲು ಕೇಂದ್ರ ಸಚಿವರಿಗೆ ಮನವಿ

210

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ದೇಶದ 15 ಕೋಟಿ ಅಲೆಮಾರಿಗಳ ಸ್ಥಿತಿಗತಿಯನ್ನು ಅಧ್ಯಯನ ಮಾಡಿ ಡಾ.ಭಿಕುರಾಮ್ ಇದಾತೆ ಆಯೋಗ ಸಲ್ಲಿಸಿದ ವರದಿಯನ್ನು ಜಾರಿಗೆ ತರಲು, ರಾಜ್ಯ ಹಿಂದುಳಿದ ಅಲೆಮಾರಿಗಳ ಒಕ್ಕೂಟ, ಬೆಂಗಳೂರು ಇವರ ನೇತೃತ್ವದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಅಲೆಮಾರಿ ಜನಾಂಗದವರಿಗೆ ಇರುವ ಕಲ್ಯಾಣ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ಮುಟ್ಟುತ್ತಿಲ್ಲ. ಅನೇಕ ಯೋಜನೆಗಳನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ. ಇನ್ನೂ ಮುಂತಾದ ಸಮಸ್ಯೆಗಳ ಕುರಿತು ಕೇಂದ್ರ ಸಚಿವರ ಗಮನಕ್ಕೆ ಈ ವೇಳೆ ತರಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ಅಲೆಮಾರಿಗಳ ಒಕ್ಕೂಟದ ಅಧ್ಯಕ್ಷ ಶಿವಾನಂದ ಪಾಚಂಗೆ, ಪ್ರಕಾಶ ಬಿಲಾನಾ, ಕೇಂದ್ರ ಸರ್ಕಾರದ ಲಲಿತ ಕಲಾ ಅಕಾಡೆಮಿಯ ದಕ್ಷಿಣ ಭಾರತ ಪ್ರಾದೇಶಿಕ ಕೇಂದ್ರದ ಹುಬ್ಬಳ್ಳಿ-ಧಾರವಾಡ ಪ್ರಾದೇಶಿಕ ಸಂಯೋಜಕ ಶ್ರೀನಿವಾಸ ಶಾಸ್ತ್ರಿ, ಪರಶುರಾಮ ಚುರುಮುರಿ, ನಾಗಭೂಷಣ ಮುಕ್ಕೆ, ಮಂಜುನಾಥ ಪಾಚಂಗೆ, ಮಾರುತಿ ಮಧುರಕರ್, ಶ್ರೀಕಾಂತ್, ರಾಜು, ಠಾಕೂರ್ ಮುಂತಾದ ಸಮುದಾಯಗಳ ಮುಖಂಡರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!