ಯಾವುದೇ ಸಮುದಾಯಕ್ಕೆ ತೊಡಕಾಗದಂತೆ ಮೀಸಲು ಸೌಲಭ್ಯ: ಸಚಿವ ನಿರಾಣಿ

192

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯ ಮಾತ್ರವಲ್ಲ ಇತರೆ ಸಮುದಾಯಗಳಿಗೂ ಕಾನೂನು ತೊಡಕಾಗದಂತೆ ಮೀಸಲಾತಿ ಸೌಲಭ್ಯ ನೀಡಲಾಗುವುದು. ಮೂರು ತಿಂಗಳಲ್ಲಿ ಕಾನೂನು ತೊಡಕಾಗದಂತೆ ಸೌಲಭ್ಯ ಸಿಗಲಿದೆ ಎಂದು ಬೃಹತ್ ಕೈಗಾರಿಕ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಶೇಕಡ 10ರಷ್ಟು ಮೀಸಲಾತಿ ಘೋಷಿಸಿದೆ. ಕೆಲವು ಕಡೆ ಎರಡ್ಮೂರು ಕಡೆ ಮೀಸಲು ಪಡೆಯತ್ತಿವೆ. ಇಂತಹ ಸಮುದಾಯವನ್ನು ಒಂದು ಕಡೆ ಮಾತ್ರ ಮೀಸಲು ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ಶೇಕಡ 4-5 ಪ್ರಮಾಣವನ್ನು ವೀರಶೈವ ಲಿಂಗಾಯತ, ಒಕ್ಕಲಿಗರಿಗೆ ಮೀಸಲು ಹೆಚ್ಚಿಸಲು 2ಸಿ, 2ಡಿ ಯೋಜಿಸಿದ್ದೇವೆ. ಪಂಚಮಸಾಲಿ ಮೀಸಲಾತಿ ಹೋರಾಟದ ಸ್ವರೂಪ ಹಾಗೂ ನಿಲುವಿನಲ್ಲಿ ನಮಗೂ ಕೂಡಲಸಂಗಮ ಪೀಠಕ್ಕೂ ತಾತ್ವಿಕ ವ್ಯತ್ಯಾಸವಿದೆ. ಹೀಗಾಗಿ ನಾವು ಇದರಲ್ಲಿ ಭಾಗವಹಿಸುತ್ತಿಲ್ಲ. ಕಾನೂನಾತ್ಮಕವಾಗಿ ಮೀಸಲು ನೀಡಲು ಹೋರಾಟ ನಡೆಸಿದ್ದು, ಸೌಜನ್ಯದ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಸಚಿವರು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!