ಹೆಜ್ಜೇನು ದಾಳಿಗೆ ಕೋಟ್ಯಾಂತರ ಬೆಲೆಯ 2 ಕುದುರೆ ಸಾವು

119

ಪ್ರಜಾಸ್ತ್ರ ಸುದ್ದಿ

ಕುಣಿಗಲ್: ಹೆಜ್ಜೇನು ದಾಳಿಯಿಂದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ 2 ಕುದುರೆಗಳು ಸಾವನ್ನಪ್ಪಿರುವ ಘಟನೆ ಸ್ಟಡ್ ಫಾರಂನಲ್ಲಿ ನಡೆದಿದೆ. ಅಮೆರಿಕ ಮೂಲದ 15 ವರ್ಷದ ಏರ್ ಸಪೋರ್ಟ್ ಹಾಗೂ ಐರ್ಲೆಂಡ್ ಮೂಲದ 10 ವರ್ಷದ ಸನಸ್ ಪರ್ ಅಕ್ಷಮ್ ಅನ್ನೋ ಕುದುರೆಗಳು ಸಾವನ್ನಪ್ಪಿವೆ.

ಇವುಗಳ ಬೆಲೆ 1 ಕೋಟಿಗೂ ಹೆಚ್ಚಿದೆ. ಬಯಲಿನಲ್ಲಿ ಮೇಯುತ್ತಿದ್ದಾಗ ಹೆಜ್ಜೇನು ದಾಳಿಗೆ ಒಳಗಾಗಿವೆ. ಅಸ್ವಸ್ಥಗೊಂಡ ಕುದುರೆಗಳನ್ನು ಫಾರಂ ವ್ಯವಸ್ಥಾಪಕ ಡಾ.ದಿನೇಶ್ ಹಾಗೂ ಮನೋಜ್ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿವೆ.

ಈ ಕುದುರೆಗಳನ್ನು ಸಂತನಾಭಿವೃದ್ಧಿಗೆ ಬಳಸಲಾಗುತ್ತಿತ್ತು. ಜೊತೆಗೆ ಹಲವು ರೇಸ್ ಗಳಲ್ಲಿ ಭಾಗಿಯಾಗಿ ಜಯಶಾಲಿಯಾಗಿದ್ದವು.




Leave a Reply

Your email address will not be published. Required fields are marked *

error: Content is protected !!