ಕ್ಯಾನ್ಸರ್ ಗೆದ್ದು ಬಂದ ರಿಶಿ ಕಪೂರ್…

379

ನ್ಯೂಯಾರ್ಕ್: ಬಾಲಿವುಡ್ ಹಿರಿಯ ನಟ ರಿಶಿ ಕಪೂರ್ ರನ್ನ ಬಿಟೌನ್ ಬಾದ್ ಶಾ ಶಾರೂಖ್ ಖಾನ್ ನ್ಯೂಯಾರ್ಕ್ ನಲ್ಲಿ ಭೇಟಿಯಾಗಿದ್ದಾರೆ. ಈ ಬಗ್ಗೆ ಹಿರಿಯ ನಟಿ ನೀತು ಕಪೂರ್, ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನ ಪೋಸ್ಟ್ ಮಾಡಿದ್ದಾರೆ. ಶಾರೂಖ್ ಭೇಟಿ ಖುಷಿ ನೀಡಿದೆ ಅಂತಾ ಹೇಳಿದ್ದಾರೆ.

ಅಷ್ಟಕ್ಕೂ ರಿಶಿ ಕಪೂರ್ ರನ್ನು ಶಾರೂಕ್ ಭೇಟಿ ಮಾಡಿದ್ದು ಯಾಕೆ ಗೊತ್ತಾ? ದಶಕಗಳ ಕಾಲ ಬಾಲಿವುಡ್ ಅಂಗಳದಲ್ಲಿ ಸೂಪರ್ ಹಿಟ್ ಸಿನ್ಮಾಗಳನ್ನು ನೀಡಿದ ಸ್ಟಾರ್ ನಟ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರಂತೆ. ಹೀಗಾಗಿ ಚಿಕಿತ್ಸೆಗಾಗಿ ಇಲ್ಲಿಗೆ ಬಂದಿರುವ ರಿಶಿ ಇದೀಗ ಸಂಪೂರ್ಣವಾಗಿ ಗುಣವಾಗಿದ್ದಾರೆ ಅಂತಾ ಹೇಳಲಾಗುತ್ತಿದೆ. ಕಳೆದ ಸೆಪ್ಟಂಬರ್ ತಿಂಗಳಲ್ಲಿಯೇ ಈ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡಿದ್ದವು. ಹಿರಿಯ ನಟ ರಿಶಿ ಕಪೂರ್ ಬ್ಲೆಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಸುದ್ದಿಯಾಗಿತ್ತು.


ಇದೀಗ ಕ್ಯಾನ್ಸರ್ ಬಗ್ಗೆ ಅವರೆ ಬಾಯಿ ಬಿಟ್ಟಿದ್ದು, ಸಂಪೂರ್ಣವಾಗಿ ಗುಣವಾಗಿದ್ದಾರೆ ಅಂತಾ ಹೇಳಿದ್ದಾರೆ. ನಟ ಶಾರೂಖ್ ರಿಶಿ ದಂಪತಿಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಹಿರಿಯ ನಟ ಗುಣಮುಖರಾಗಿರುವ ಸುದ್ದಿ ತಿಳಿದ ಬಿಟೌನ್ಅ ಮಂದಿ ಹಾಗೂ ಅವರ ಭಿಮಾನಿಗಳು ಸಂಸತ ವ್ಯಕ್ತಪಡಿಸಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!