ಸಿಂದಗಿಯಲ್ಲಿ ರಸ್ತೆ ಅಪಘಾತ: 15 ಜನರಿಗೆ ಗಾಯ

524

ಪ್ರಜಾಸ್ತ್ರ ಬ್ರೇಕಿಂಗ್ ನ್ಯೂಸ್

ಸಿಂದಗಿ: ಪಟ್ಟಣದ ಹೊರವಲಯದ ಎನ್ಎಚ್ 50 ರಸ್ತೆಯ ಯರಗಲ್ಲ ಸಮೀಪ ಟಾಟಾ ಏಸ್ ವಾಹನ ಪಲ್ಟಿಯಾಗಿದೆ. ಇದರಿಂದಾಗಿ 15 ಜನರು ಗಾಯಗೊಂಡಿದ್ದಾರೆ.

ಗುರುವಾರ ಬೆಳಗಿನ ಜಾವ ಸುಮಾರು 4 ಗಂಟೆ ಸಮಯದಲ್ಲಿ ಅಪಘಾತವಾಗಿದೆ. ಈ ವೇಳೆ ಲಕ್ಷ್ಮಿ ಚೇತನ ಸೇಗುಣಸಿ, ದ್ರಾಕ್ಷಾಣಿ ಮರತುಜಾ ಹಿರೇಮಠ, ಅನುರಾದಾ ದೇವಪ್ಪ ಮೇಟಿ, ನಿಲವ್ವ ಬಸಪ್ಪ ಮೇಟಿ ಎಂಬುವರು ಸೇರಿದಂತೆ ಮಕ್ಕಳು ಸೇರಿ 15 ಜನರು ಗಾಯಗೊಂಡಿದ್ದಾರೆ. ಗಾಯಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುನಗುಂದ ತಾಲೂಕಿನ ಬೆವಿನಾಳ ಗ್ರಾಮದಿಂದ ಅಫಜಲಪುರ ತಾಲೂಕಿನ ಘತ್ತರಗಿ ಭಾಗ್ಯವಂತಿದೇವಿ ದೇವಸ್ಥಾನಕ್ಕೆ ಜವಳ ಕಾರ್ಯಕ್ಕೆ, ನಂಬರ್ ಇಲ್ಲದ ಟಾಟಾ ಏಸ್ ಗೂಡ್ಸ್ ವಾಹಾನದಲ್ಲಿ 19 ಜನರು ಹೊರಟಿದ್ದಾಗ ಸಿಂದಗಿ ಪಟ್ಟಣದ ಹೊರವಲಯದಲ್ಲಿ ಪಲ್ಟಿಯಾಗಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆಲವರಿಗೆ ಗಂಭೀರ ಗಾಯಗಳಾಗಿವೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.




Leave a Reply

Your email address will not be published. Required fields are marked *

error: Content is protected !!