‘ರಾಬರ್ಟ್ ದರ್ಶನ’ ಲೇಟ್.. ಡಿ ಬಾಸ್ ಫ್ಯಾನ್ಸ್ ದಿಲ್ ಖುಷ್..

551

ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಕರೋನಾದಿಂದಾಗಿ ರಾಜ್ಯ ಸರ್ಕಾರ ಮಾರ್ಚ್ 31ರ ವರೆಗೂ ಲಾಕ್ ಡೌನ್ ಎಂದಿತ್ತು. ಹೀಗಾಗಿ ಬೇಗ ಬೇಗ ಪೋಸ್ಟ್ ಪ್ರೊಡೆಕ್ಷನ್ ಕೆಲಸ ಮುಗಿಸಿ ಸೆನ್ಸಾರ್ ಮುಂದೆ ಹೋಗುವ ಪ್ಲಾನ್ ಮಾಡಿತ್ತು ಚಿತ್ರ ತಂಡ. ಆದ್ರೆ, ಅದೀಗ ಎಲ್ಲವೂ ಉಲ್ಟಾ ಆಗಿದೆ.

ಏಪ್ರಿಲ್ 14ರ ವರೆಗೂ ದೇಶವೇ ಲಾಕ್ ಡೌನ್ ಆಗಿದೆ. ಹೀಗಾಗಿ ರಾಬರ್ಟ್ ಮೂವಿ ಮುಂದೂಡದೆ ದಾರಿಯೇ ಇಲ್ಲ. ಈ ಬಗ್ಗೆ ಅಭಿಮಾನಿಗಳು ಸಹ ನಿರ್ದೇಶಕರ ಬಳಿ ಮೂವಿ ರಿಲೀಸ್ ಮುಂದೂಡಲು ಮನವಿ ಮಾಡಿಕೊಂಡಿದ್ದಾರೆ. ದರ್ಶನ ಮೂವಿಗಳಂದ್ರೆ ಜಾತ್ರೆ ರೀತಿ ನಡೆಯುತ್ತೆ. ಮೂವಿ ರಿಲೀಸ್ ಆದ ಒಂದು ವಾರ ಪ್ರೇಕ್ಷಕರನ್ನ ಕಂಟ್ರೋಲ್ ಮಾಡಲು ಆಗೋದಿಲ್ಲ. ಅದರಲ್ಲೂ ರಾಬರ್ಟ್ ಕ್ರಿಯೇಟ್ ಮಾಡಿರುವ ಹವಾ ಇನ್ನೂ ಜೋರಾಗಿದೆ.

ಈ ಬಗ್ಗೆ ರಾಬರ್ಟ್ ಚಿತ್ರ ತಂಡ ಇಂದು ಸ್ಪಷ್ಟಪಡಿಸಿದ್ದು ಜೂನ್ ತಿಂಗಳಲ್ಲಿ ಚಿತ್ರವನ್ನ ರಿಲೀಸ್ ಮಾಡಲಾಗುತ್ತೆ. ದಿನಾಂಕ ಯಾವಾಗ ಅನ್ನೋದು ಆದಷ್ಟು ಬೇಗ ಹೇಳ್ತೀವಿ ಎಂದಿದೆ. ಹೀಗಾಗಿ ದರ್ಶನ ಅಭಿಮಾನಿಗಳಿಗೆ ಫುಲ್ ಖುಷಿಯಾಗಿದೆ.




Leave a Reply

Your email address will not be published. Required fields are marked *

error: Content is protected !!