ಟಾಲಿವುಡ್ ನಟಿ ತ್ರಿಶಾ ತಮ್ಮ ಮದುವೆ ವಿಚಾರ ಹಂಚಿಕೊಂಡಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನದ ಟೈಂನಲ್ಲಿ ಮದುವೆ ಬಗ್ಗೆ ತಿಳಿಸಿದ್ದಾರೆ. ನಾನು ಮದುವೆಯಾದ್ರೆ ಲವ್ ಮ್ಯಾರೇಜ್ ಆಗುತ್ತೇನೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದ್ದಾರೆ.
ಈಗ ಹರಿದಾಡ್ತಿರುವುದೆಲ್ಲವೂ ಗಾಸಿಪ್. ನಾನು ಲವ್ ಮ್ಯಾರೇಜ್ ಆಗುತ್ತೇನೆ. ಅದು ಲಾಸ್ ವೆಗಸ್ ನಲ್ಲಿ. ಲಾಸ್ ವೆಗ್ಸ್ ನನ್ಗೆ ತುಂಬಾ ಇಷ್ಟ. ಹೀಗಾಗಿ ಅಲ್ಲಿಯೇ ವಿವಾಹ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಆದ್ರೆ, ಹುಡುಗ ಯಾರು ಅನ್ನೋದು ಹೇಳಿಲ್ಲ. ಇದ್ರಿಂದಾಗಿ ತ್ರಿಶಾ ಬಾಯ್ ಫ್ರೆಂಡ್ ಯಾರು? ಯಾವಾಗ ಮದ್ವೆಯಾಗ್ತಿದ್ದಾರೆ ಅನ್ನೋ ಕುತೂಹಲ ಮೂಡಿದೆ.