ಇಬ್ಬರು ಮಕ್ಕಳು ಸೇರಿ ಇಂದು 10 ಮಂದಿಗೆ ಸೋಂಕು

441

ಬೆಂಗಳೂರು: ಕೋವಿಡ್ 19 ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಸಿಲಿಕಾನ್ ಸಿಟಿಯಲ್ಲಿ 9 ವರ್ಷದ ಬಾಲಕಿ ಹಾಗೂ 7 ವರ್ಷದ ಬಾಲಕ ಸೇರಿದಂತೆ ಒಂದು ಒಂದೇ ದಿನದಲ್ಲಿ 10 ಮಂದಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಆರೋಗ್ಯ ಇಲಾಖೆ ಹೆಲ್ತ್ ಬುಲೆಟ್ ರಿಲೀಸ್ ಮಾಡಿದ್ದು, ಒಂದೇ ದಿನದಲ್ಲಿ 10 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆತಂಕದ ವಿಚಾರವೆಂದರೆ ಇಬ್ಬರು ಮಕ್ಕಳಿಗೆ ಈ ಸೋಂಕು ತಗುಲಿದೆ. ಹೀಗಾಗಿ ಸಾರ್ವಜನಿಕರು ಆದಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸಾವಿನ ಜೊತೆ ಹುಡುಗಾಟಿಕೆ ಆಡಬೇಡಿ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡು ನಡೆದುಕೊಳ್ಳುವುದು ಎಲ್ಲರಿಗೂ ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!