ಮುಂಬೈ ದಾಳಿ: ಹುತಾತ್ಮ ಯೋಧರಿಗೆ ಗೌರವ

117

ಪ್ರಜಾಸ್ತ್ರ ಸುದ್ದಿ

ಮುಂಬೈ: ಮುಂಬೈ ಮೇಲೆ ಉಗ್ರರು ದಾಳಿ ನಡೆಸಿ 15 ವರ್ಷಗಳು ಕಳೆದಿವೆ. ಈ ಕಾರಳ ನೆನಪು ಇಂದಿಗೂ ಎಲ್ಲರಿಗೂ ಕಾಡುತ್ತಿದೆ. ಈ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.

ನಗರದ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಿರ್ಮಿಸಿದ ಸ್ಮಾರಕಕ್ಕೆ, ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್, ಸಿಎಂ ಏಕನಾಥ್ ಶಿಂಧೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು. ಈ ವೇಳೆ ಮಾತನಾಡಿದ ಸಿಎಂ ಶಿಂಧೆ, ಹುತಾತ್ಮ ಕುಟುಂಬಗಳೊಂದಿಗೆ ನಾವು ಇದ್ದೇವೆ ಅಂತಾ ಹೇಳಿದರು.

ನವೆಂಬರ್ 26, 2008ರಲ್ಲಿ ಉಗ್ರರು ದಾಳಿ ನಡೆಸಿ ನಾಲ್ಕು ದಿನಗಳಲ್ಲಿ 166 ಜನರು ಮೃತಪಟ್ಟಿದ್ದಾರೆ. 18 ಜನ ಪೊಲೀಸರು ಹಾಗೂ ಯೋಧರು ಹುತಾತ್ಮರಾಗಿದ್ದಾರೆ. 300 ಜನರು ಗಾಯಗೊಂಡಿದ್ದಾರೆ.
Leave a Reply

Your email address will not be published. Required fields are marked *

error: Content is protected !!