ಸರ್ಕಾರಕ್ಕೆ ದೇಣಿಗೆ ನೀಡಲು ಸಿಎಂ ಮನವಿ

363

ಬೆಂಗಳೂರು: ಎಲ್ಲೆಡೆ ಕರೋನಾ ಕಾರ್ಮೋಡ ಕವಿದಿದೆ. ಹೀಗಾಗಿ ಇಡೀ ದೇಶ ಲಾಕ್ ಡೌನ್ ಆಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕರೋನಾ ವಿರುದ್ಧ ಸಕಲ ರೀತಿಯ ಕ್ರಮಗಳನ್ನ ತೆಗೆದುಕೊಳ್ತಿದೆ. ಇಂತಹ ಟೈಂನಲ್ಲಿ ಸಂಪನ್ಮೂಲ ಕ್ರೋಢಿಕರಣ ಅತೀ ಮುಖ್ಯ. ಹೀಗಾಗಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಧನಸಹಾಯ ಮಾಡಲು ಇಚ್ಛಿಸುವವರು ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್ 19 ಖಾತೆಗೆ ಹಣವನ್ನ ಜಮಾ ಮಾಡಬಹುದು. ಈ ಧನಸಹಾಯವು ತೆರಿಗೆ ವಿನಾಯಿತಿಯನ್ನ ಹೊಂದಿದೆ. ಯಾರು ಆರ್ಥಿಕವಾಗಿ ಶಕ್ತಿವಂತರು ಇದ್ದಾರೋ ಅವರು ಈ ಸಂದರ್ಭದಲ್ಲಿ ದೇಣಿಗೆ ನೀಡಿ ಸರ್ಕಾರದೊಂದಿಗೆ ಕೈಜೋಡಿಸುವ ಮೂಲಕ ಕರೋನಾವನ್ನ ಮೆಟ್ಟಿ ನಿಲ್ಲುವಲ್ಲಿ ಸಹಕರಿಸಬಹುದು.

ಓದುಗರ ಗಮನಕ್ಕೆ



Leave a Reply

Your email address will not be published. Required fields are marked *

error: Content is protected !!