ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಚಿತ್ರದ 2ನೇ ಸಾಂಗ್ ರಿಲೀಸ್ ಆಗಿದೆ. ರಿಲೀಸ್ ಆದ 2 ಗಂಟೆಯಲ್ಲಿಯೇ 3 ಲಕ್ಷಕ್ಕೂ ಅಧಿಕ ವೀಕ್ಷಕರು ಈ ಸಾಂಗ್ ನೋಡಿದ್ದಾರೆ. ಈ ಹಾಡಿನಲ್ಲಿ ರಾಮನಾಮ ಜಪವನ್ನ ಭರ್ಜರಿಯಾಗಿ ಮಾಡಲಾಗಿದೆ.
ಬ್ಯಾಕ್ ಡ್ರಾಪ್ ನಲ್ಲಿ ರಾಮ ಮಂದಿರ ಮಾದರಿ ಸೆಟ್, ಬೃಹತ್ ರಾಮನ ಮೂರ್ತಿ ನಿರ್ಮಿಸಿದ್ದು, ನಟ ದರ್ಶನ ರಾಮ ಭಂಟ ಹನುಮನ ಗೆಟಪ್ ನಲ್ಲಿ ಮಿಂಚಿದ್ದಾರೆ. ಸಾಂಗ್ ಜೊತೆಗೆ ಮೇಕಿಂಗ್ ವಿಡಿಯೋ ಬಿಟ್ಟಿದ್ದು ಡಿ ಬಾಸ್ ಅಭಿಮಾನಿಗಳು ಫುಲ್ ಪಿಧಾ ಆಗಿದ್ದಾರೆ.
ಅರ್ಜುನ ಜನ್ಯ ಮ್ಯೂಸಿಕ್, ದಿವ್ಯಕುಮಾರ ಹಾಡಿರುವ ಹಾಡು ಭರ್ಜರಿ ಸೌಂಡ್ ಮಾಡ್ತಿದೆ. ಹೋಳಿ ಹಬ್ಬದ ಒಂದು ದಿನ ಮೊದಲೇ ಬಂದಿರುವ ಸಾಂಗ್ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ಈಗಾಗ್ಲೇ ಬಾ ಬಾ ಬಾ ನಾ ರೆಡಿ ಅನ್ನೋ ಲಿರಿಕಲ್ ಸಾಂಗ್ ಸೂಪರ್ ಹಿಟ್ ಆಗಿದ್ದು ಇದೀಗ ಜೈ ಶ್ರೀರಾಮ ಹಾಡು ಅಬ್ಬರಿಸುತ್ತಿದೆ.