ರೋಸ್ ವಾಟರ್ ನಿಂದ ಇಷ್ಟೆಲ್ಲ ಲಾಭ

342

ಪ್ರಜಾಸ್ತ್ರ ವಿಶೇಷ

ಒಂದೊಂದು ಹೂವು, ಹಣ್ಣಿನಲ್ಲಿಯೂ ಔಷಧಿ ಗುಣವಿರುತ್ತೆ. ಹೀಗಾಗಿ ಗಿಡಮೂಲಿಕೆಗಳಿಂದ ಹಲವು ಔಷಧಿಗಳನ್ನ ತಯಾರು ಮಾಡಲಾಗುತ್ತೆ. ಅದೇ ರೀತಿ ಪ್ರೀತಿಯ ರಾಯಭಾರಿ ಗುಲಾಬಿಯಿಂದಲೂ ಹಲವಾರು ಪ್ರಯೋಜನಗಳಿವೆ. ಹಾಗಾದ್ರೆ ರೋಸ್ ವಾಟರ್ ನಿಂದ ಏನೆಲ್ಲ ಲಾಭವಿದೆ ಅನ್ನೋದು ಇಲ್ಲಿದೆ ಓದಿ..

ರೋಸ್ ವಾಟರ್ ಅನ್ನೋದು ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದೆ. ನಟಿಯರು, ಕ್ರೀಡಾ ತಾರೆಯರು ಸೇರಿದಂತೆ ಬಹುತೇಕ ಹೆಣ್ಮಕ್ಕಳು ರೋಸ್ ವಾಟರ್ ಬಳಕೆ ಮಾಡ್ತಾರೆ. ಯಾಕಂದ್ರೆ, ಇದ್ರಿಂದ ಮೊಡವೆ, ಚರ್ಮದ ಮೇಲಿನ ಗುಳ್ಳೆ ಮತ್ತು ಕಲೆಗಳನ್ನ ಕಡಿಮೆ ಮಾಡುವ ಶಕ್ತಿ ಇದೆ.

ಇನ್ನು ಒತ್ತಡ, ತಲೆನೋವು, ಮೈಗ್ರೇನ್(ವಿಪರೀತ ತಲೆನೋವು) ಗೆ ಔಷಧಿಯಾಗಿ ರೋಸ್ ವಾಟರ್ ಬಳಕೆಯಾಗುತ್ತೆ. ಹೀಗಾಗಿ ಅರೋಮಥೆರಪಿಯಲ್ಲಿ ತಲೆನೋವಿಗೆ ಇದನ್ನ ಉಪಯೋಗಿಸಲಾಗುತ್ತೆ. ಚಿಕ್ಕಬಟ್ಟೆಯನ್ನ ರೋಸ್ ವಾಟರ್ ನಿಂದ ಒದ್ದೆ ಮಾಡಿ ಹಣೆ ಮೇಲೆ ಇಡಬಹುದು. ನಂಜು ನಿರೋಧಕವಾಗಿದ್ದು, ಅತ್ಯಂತ ಕಡಿಮೆ ಬೆಲೆಯಲ್ಲಿ ರೋಸ್ ವಾಟರ್ ಸಿಗುತ್ತೆ. ಉತ್ತಮವಾದ ರೋಸ್ ವಾಟರ್ ಖರೀದಿ ಮಾಡುವುದು ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!