ಜನುಮ ದಿನವೇ ಶಾಸಕ ನಿಧನ

303

ಪ್ರಜಾಸ್ತ್ರ ಸುದ್ದಿ

ಚೆನ್ನೈ: ತಮಿಳುನಾಡಿನ ಡಿಎಂಕೆ ಶಾಸಕ ಜೆ. ಆನ್ಬಳಗನ್ ಕರೋನಾದಿಂದಾಗಿ ಇಂದು ಮೃತಪಟ್ಟಿದ್ದಾರೆ. ಇಂದು ಅವರ 62ನೇ ವರ್ಷದ ಹುಟ್ಟು ಹಬ್ಬವಾಗಿತ್ತು. ಜನುಮ ದಿನವೇ ಸಾವನ್ನಪ್ಪಿದ್ದು ಕುಟುಂಬಸ್ಥರು, ಆಪ್ತರು, ಅಭಿಮಾನಿಗಳಿಗೆ ಶಾಕ್ ಆಗಿದೆ.

ಆನ್ಬಳಗನ್ ಸಾವಿನೊಂದಿಗೆ ತಮಿಳುನಾಡಿನಲ್ಲಿ ಕರೋನಾಗೆ ಬಲಿಯಾದ ಮೊದಲ ಜನಪ್ರತಿನಿಧಿಯಾಗಿದ್ದಾರೆ. ರೇಲಾ ಇನ್ಸ್ ಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಶಾಸಕ ಆನ್ಬಳಗನ್ ಸಾವಿಗೆ ಸಂತಾಪ ಸೂಚಿಸಲಾಗಿದೆ.

2001, 2011 ಹಾಗೂ 16ರಲ್ಲಿ ಶಾಸಕರಾಗಿ ಆಯ್ಕೆ ಯಾಗಿದ್ರು. ಇದರ ಜೊತೆಗೆ ತಮಿಳಿನ ಕೆಲ ಚಿತ್ರಗಳಿಗೆ ವಿತರಕರಾಗಿದ್ರು. ಆನ್ಬಳಗನ್ ನಿಧನದಿಂದಾಗಿ ತಮಿಳುನಾಡು ವಿಧಾನಸಭೆಯಲ್ಲಿ 3 ಶಾಸಕ ಸ್ಥಾನ ತೆರವುಗೊಂಡಿವೆ. ಈ ಮೂರು ಡಿಎಂಕೆ ಪಕ್ಷದ ಶಾಸಕರೆ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!