24 ಗಂಟೆ.. 9,985 ಕೇಸ್.. 279 ಸಾವು..

446

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೇಂದ್ರ ಆರೋಗ್ಯ ಇಲಾಖೆ ಕರೋನಾ ಹೆಲ್ತ್ ಬುಲೆಟಿನ್ ಬಿಟ್ಟಿದ್ದು, ಮತ್ತೆ 9,985 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕಳೆದೊಂದು ವಾರದಿಂದ ಸತತವಾಗಿ 9 ಸಾವಿರ ಮೇಲೆ ಸೋಂಕು ಕಾಣಿಸಿಕೊಳ್ತಿದೆ.

ಇದುವರೆಗೂ ದೇಶದಲ್ಲಿ 2,76,583 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು 24 ಗಂಟೆಯಲ್ಲಿ 279 ಜನ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 7,745ಕ್ಕೆ ಏರಿಕೆಯಾಗಿದೆ. ಕರೋನಾ ಸೋಂಕಿನಿಂದ ಇಲ್ಲಿಯವರೆಗೆ 1,35,206 ಜನ ಗುಣಮುಖರಾಗಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ಮಹಾರಾಷ್ಟ್ರದಲ್ಲಿ ಒಂದೇ ದಿನ 2,251 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 90,787 ಆಗಿದ್ದು, ಲಕ್ಷದ ಸಮೀಪ ಬಂದು ನಿಂತಿದೆ.




Leave a Reply

Your email address will not be published. Required fields are marked *

error: Content is protected !!