ರಾಜ್ಯಸಭೆ, ಪರಿಷತ್ ಪ್ರವೇಶಕ್ಕೆ ಗೌರವ ಇಲ್ವೆ? ಹಿಂಬಾಗಿಲು ಪದ ಬಳಕೆ ಯಾಕೆ?

459

ಪ್ರಜಾಸ್ತ್ರ ವಿಶೇಷ

ಬಹುತೇಕ ಅವಿರೋಧ ಆಯ್ಕೆಯಾಗುವ ಸಾಧ್ಯತೆಯಿದೆ.

ಇನ್ನು ರಾಜ್ಯದ 4 ವಿಧಾನ ಪರಿಷತ್ ಚುನಾವಣೆ ಸಹ ನಡೆಯಬೇಕಿದೆ. ಕರೋನಾದಿಂದಾಗಿ ಇದನ್ನ ಮುಂದೂಡಲಾಗಿದೆ. ಹೀಗಾಗಿ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಗಾಗಿ ಮತ್ತಷ್ಟು ಗುದ್ದಾಟ ನಡೆಯಲಿದೆ. ಇದು ಆಯಾ ಪಕ್ಷಗಳ ಆಂತರಿಕ ವಿಚಾರ. ಆದ್ರೆ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಗೆ ಸ್ಪರ್ಧೆ ಮಾಡುವವರನ್ನ ಯಾಕೆ ಹಿಂಬಾಗಿಲಿನಿಂದ ಪ್ರವೇಶ ಎಂದು ಕರೆಯಲಾಗುತ್ತೆ? ಹೀಗೆ ಸಂಸತ್ತು ಹಾಗೂ ಸದನಕ್ಕೆ ಆಯ್ಕೆ ಆಗುವವರಿಗೆ ಗೌರವ ಇಲ್ಲವೆ? ಈ ಪದ ಬಳಸುವಾಗ ಸ್ವಪಕ್ಷೀಯ ಅಭ್ಯರ್ಥಿಗಳಿಗೂ ಅನ್ವಯವಾಗುತ್ತೆ ಅನ್ನೋದು ಜನಪ್ರತಿನಿಧಿಗಳು ಮರೆತು ಆಡುವ ಉದ್ದೇಶವೇನು ಅನ್ನೋ ಪ್ರಶ್ನೆ ಮೂಡುತ್ತೆ.

ಶಾಸಕ ಹಾಗೂ ಸಂಸದರಾಗಬೇಕು ಅಂದ್ರೆ, ಚುನಾವಣೆಗೆ ನಿಂತು ಜನರಿಂದ ಆಯ್ಕೆ ಆಗಿ ಬರಬೇಕು. ಜನರು ನೀಡುವ ತೀರ್ಪು ಶಾಸಕ, ಸಂಸದರನ್ನ ಮಾಡುತ್ತೆ. ಇದು ನೇರ ಚುನಾವಣೆ ಎನ್ನಲಾಗುತ್ತೆ. ರಾಜ್ಯಸಭೆ ಹಾಗೂ ಪರಿಷತ್ ಗೆ ಸ್ಪರ್ಧೆ ವಿಚಾರ ಬಂದಾಗ, ಹಿಂಬಾಗಿಲು ಮಾತು ಬರುತ್ತೆ. ಅವರನ್ನ ಅವಮಾನಿಸಲಾಗುತ್ತೆ. ಹಾಗಾದ್ರೆ, ಇವರ ಆಯ್ಕೆ ಹೇಗೆ ಆಗುತ್ತೆ ಗೊತ್ತಾ?

ರಾಜ್ಯಸಭೆ ಸದಸ್ಯರ ಆಯ್ಕೆ

ರಾಜ್ಯಸಭೆ ಸದಸ್ಯರ ಸಂಖ್ಯೆ 250 ಇದೆ. 12 ಜನರನ್ನ ರಾಷ್ಟ್ರಪತಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನ ಆಯ್ಕೆ ಮಾಡ್ತಾರೆ. ಉಳಿದ ಸದಸ್ಯರನ್ನ, ರಾಜ್ಯ ವಿಧಾನಸಭೆಯ ಸದಸ್ಯರುಗಳಿಂದ ಆಯ್ಕೆ ಮಾಡಲಾಗುತ್ತೆ. ಅಂದ್ರೆ, ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಇವರನ್ನ ಆಯ್ಕೆ ಮಾಡಿ ಕಳಿಸುತ್ತಾರೆ. ಇವರು ಸಚಿವರಾಗಬಹುದು.(ಉದಾ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದವರು.) ಸದಸ್ಯರ ಅಧಿಕಾರಾವಧಿ 6 ವರ್ಷ. 2 ವರ್ಷಕ್ಕೊಮ್ಮೆ 1/3ರಷ್ಟು ಜನರ ಅವಧಿ ಮುಗಿಯುತ್ತೆ. ಉಪರಾಷ್ಟ್ರಪತಿ ರಾಜ್ಯಸಭೆಯ ಸಭಾಧ್ಯಕ್ಷರಾಗಿರ್ತಾರೆ.

ಜನರಿಂದ ಆಯ್ಕೆಯಾದ ಸಂಸದರಂತೆ ಇವರಿಗೆ ಸಮಾನ ಅಧಿಕಾರ ಇರುತ್ತೆ. ಆದ್ರೆ, ಇವರು ಜನರಿಂದ ನೇರವಾಗಿ ಆಯ್ಕೆಯಾಗದ ಕಾರಣ ಹಿಂಬಾಗಿಲಿನಿಂದ ಪ್ರವೇಶ ಅನ್ನೋ ವ್ಯಂಗ್ಯ ಮಾತುಗಳನ್ನ ಆಡಲಾಗುತ್ತೆ.

ವಿಧಾನ ಪರಿಷತ್ ಸದಸ್ಯರ ಆಯ್ಕೆ

ದೇಶದ 7 ರಾಜ್ಯಗಳಲ್ಲಿ ಮಾತ್ರ ಪರಿಷತ್ ಕಾರ್ಯನಿರ್ವಹಿಸ್ತಿದೆ. ರಾಜ್ಯದಲ್ಲಿ ಇದರ ಸಂಖ್ಯೆ 75 ಇದೆ. ಇಲ್ಲಿಯೂ ಸಹ ರಾಜ್ಯಸಭೆ ಸದಸ್ಯರಂತೆ, ಕಲೆ, ಸಾಹಿತ್ಯ, ಕ್ರೀಡೆ, ವಿಜ್ಞಾನ, ಸಿನಿಮಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರ ಜೊತೆಗೆ ಶಿಕ್ಷಕರ ಕ್ಷೇತ್ರ, ಪದವಿಧರ ಕ್ಷೇತ್ರದಿಂದ ಸದಸ್ಯರನ್ನ ಆಯ್ಕೆ ಮಾಡಲಾಗುತ್ತೆ.

ಇವರ ಅಧಿಕಾರದವಧಿ 6 ವರ್ಷ. ಇಲ್ಲಿಯೂ 2 ವರ್ಷಕ್ಕೊಮ್ಮೆ 1/3 ಸದಸ್ಯರ ಅವಧಿ ಮುಗಿಯುತ್ತೆ. ರಾಜ್ಯಡ ಡಿಸಿಎಂ ಲಕ್ಷ್ಮಣ ಸವದಿ, ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಪರಿಷತ್ ಸದಸ್ಯರು) ಹೀಗೆ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸದಸ್ಯರ ಆಯ್ಕೆ, ಜನರಿಂದ ಆಯ್ಕೆಯಾದ ಶಾಸಕರು, ಸಂಸದರು ಮಾಡುವುದ್ರಿಂದ ಅವರ ಪಕ್ಷದ ಮುಲಾಜಿನಲ್ಲಿರಬೇಕು. ಅವರಿಗೆ ಋಣಿ, ಇವರಿಗೆ ಆಭಾರಿ ಎಂದು ಹೇಳಿಕೊಂಡು ತಿರುಗಾಡಬೇಕು. ಮುತ್ಸದ್ದಿ, ಹಿರಿಯರು ರಾಜಕೀಯ ಪಡಸಾಲೆಯಲ್ಲಿ ಇರಬೇಕು ಎಂದರೂ, ಇದೊಂದು ರೀತಿ ಬೇರೆಯವರ ಹಂಗಿನಲ್ಲಿರುವುದು.




Leave a Reply

Your email address will not be published. Required fields are marked *

error: Content is protected !!