ಈ ಬಿರಿಯಾನಿಗೆ ಜಸ್ಟ್ 19 ಸಾವಿರ ರೂಪಾಯಿ!

325

ಪ್ರಜಾಸ್ತ್ರ ಸುದ್ದಿ

ಬಿರಿಯಾನಿ ಅಂದ್ರೆ ಅನೇಕರ ಬಾಯಿಯಲ್ಲಿ ನೀರು ಬರುತ್ತೆ. ಹೀಗಾಗಿ ಎಲ್ಲಿ ಸ್ಪೆಷಲ್ ಬಿರಿಯಾನಿ ಕೊಡ್ತಾರೆ ಎಂದು ತಿಳಿದುಕೊಂಡು ಅಲ್ಲಿ ಹೋಗಿ ತಿನ್ನುವುದು ಸಹಜ. ಒಂದೊಂದು ಕಡೆ ಒಂದೊಂದು ರೇಟ್. 200, 500 ರೂಪಾಯಿ ಬಿರಿಯಾನಿ ರೇಟ್ ಇರಬಹುದು. ಸ್ಟಾರ್ ಹೋಟೆಲ್ ಗಳಲ್ಲಾದ್ರೆ ಅಬ್ಬಾಬ್ಬ ಅಂದ್ರೆ 1000 ಆಗಬಹುದು. ಆದ್ರೆ, ಇಲ್ಲಿ ಬರೋಬ್ಬರಿ 19 ಸಾವಿರ ರೂಪಾಯಿ ಬಿರಿಯಾನಿ ಇದೆ.

ಯೆಸ್, ದುಬೈನ ಬಾಂಬೆ ಬರೋದಲ್ಲಿ ರಾಯಲ್ ಗೋಲ್ಡ್ ಬಿರಿಯಾನಿ ಸಿಗುತ್ತೆ. ಇದಕ್ಕೆ 1000 ಎಇಡಿ. ಅಂದ್ರೆ, 19 ಸಾವಿರ ರೂಪಾಯಿ. ದೊಡ್ಡದಾದ ಚಿನ್ನದ ತಟ್ಟೆಯಲ್ಲಿ ಮೂರು ತರಹದ ರೈಸ್ ಬಡಿಸಲಾಗುತ್ತೆ. ಇದರಲ್ಲಿ ಮೊಟ್ಟೆ, ಗೋಡಂಬಿ, ದಾಳಿಂಬೆ ಸೇರಿದಂತೆ ವಿವಿಧ ಖಾದ್ಯಗಳನ್ನ ಬೆರಸಲಾಗಿರುತ್ತೆ.

ರಜಪೂತ್ ಚಿಕನ್ ಕಬಾಬ್ಸ್, ಮಲೈ ಚಿಕನ್ ರೋಸ್ಟ್, ಮುಘಲೈ ಕೋಪ್ತಾಸ್, ಕಾಶ್ಮೀರಿ ಲ್ಯಾಂಬ್ ಸೀಕ್ ಕಬಾಬ್ಸ್, ಓಲ್ಡ್ ಡೆಲ್ಲಿ ಲ್ಯಾಂಬ್ ಚಾಪ್ಸ್ ಇರುತ್ತೆ. ಇದರ ಜೊತೆಗೆ ನಿಹಾರ್ ಸಾಲನ್, ಬಾದಾಮಿ, ದಾಳಿಂಬೆ ರೈತಾ ಜೋಧ್ ಪುರಿ ಸಾಲನ್ ನೀಡಲಾಗುತ್ತೆ. ಕೋಫ್ತಾ ಕಬಾಬ್ ನ್ನ ಚಿನ್ನದ ಎಲೆಗಳಿಂದ ಅಲಂಕಾರ ಮಾಡಿರಲಾಗುತ್ತೆ. ಹೀಗಾಗಿ 1 ಬಿರಿಯಾನಿಗೆ 19 ಸಾವಿರ ರೂಪಾಯಿ ನೀಡಬೇಕು.




Leave a Reply

Your email address will not be published. Required fields are marked *

error: Content is protected !!