ನಾಯಕನ ಪಲಾಯನವಾದ ಕಾಂಗ್ರೆಸ್ ಸಮಸ್ಯೆ: ಖುರ್ಶೀದ

367

ನವದೆಹಲಿ: ಕಾಂಗ್ರೆಸ್ ನ ಸದ್ಯದ ಪರಿಸ್ಥಿತಿ ಹಾಗೂ ಭವಿಷ್ಯದಲ್ಲಿ ಎದುರಸಬೇಕಾಗಿರುವ ಸವಾಲುಗಳ ಬಗ್ಗೆ ಹಿರಿಯ ನಾಯಕ, ಮಾಜಿ ವಿದೇಶಾಂಗ ಸಚಿವ ಸಲ್ಮಾನ ಖುರ್ಶೀದ ಹೇಳಿದ್ದಾರೆ.

ಕಾಂಗ್ರೆಸ್ ನ ಅತಿದೊಡ್ಡ ಸಮಸ್ಯೆ ಎಂದರೆ, ನಾಯಕನ ಪಲಾಯನವಾದ ಅಂತಾ ಹೇಳುವ ಮೂಲಕ ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಉತ್ತರದಲ್ಲಿ ಹರಿಯಾಣ, ಪಶ್ಚಿಮದಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣೆ ಎದುರಿಸ್ತಿದೆ. ಆದ್ರೆ, ಅಲ್ಲಿ ನಾಯಕರ ನಡುವೆ ಭಿನ್ನಮತವಿದೆ. ಅದನ್ನ ಬಗೆಹರಿಸಲು ಆಗ್ತಿಲ್ಲ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಸೋಲಿನಿಂದ ಕಾಂಗ್ರೆಸ್ ಗೆ ಹೊರ ಬರಲು ಆಗ್ತಿಲ್ಲ. 542 ಸಂಸದೀಯ ಸ್ಥಾನಗಳಲ್ಲಿ ಕೇವಲ 52 ಸ್ಥಾನ ಗೆದ್ದಿದ್ದು, ಬಿಜೆಪಿ ಗೆದ್ದಿರುವ 303 ಸ್ಥಾನಗಳಿಗೆ ಹೋಲಿಸಿದ್ರೆ ತೀವ್ರ ಹಿನ್ನೆಡೆ ಅಂತಾ ಹೇಳಿದ್ದಾರೆ. ಈ ಸೋಲಿನಿಂದ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ ಗಾಂಧಿ ರಾಜೀನಾಮೆ ನೀಡಿದ್ರು. ನಂತರ ಅವರ ತಾಯಿ ಮಧ್ಯಂತರ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಭವಿಷ್ಯದಲ್ಲಿ ಸಾಕಷ್ಟು ಸವಾಲುಗಳನ್ನ ಎದುರಿಸಬೇಕಿದೆ ಅಂತಾ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!