ಮರಾಠಿಗರ ಪುಂಡಾಟ: ಏನ್ ಮಾಡ್ತಿದ್ದೀರಿ ಸಿಎಂ? ವೋಟ್ ಬ್ಯಾಂಕ್ ಮುಖ್ಯವಾಯ್ತೆ?

349

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಜಿಲ್ಲೆಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ವಿಚಾರ ಸಂಬಂಧ ಕನ್ನಡಿಗರು ಹಾಗೂ ಮರಾಠಿಗರ ನಡುವೆ ಗಲಾಟೆ ನಡೆದಿದೆ. ಮರಾಠರು ಪುಂಡಾಟ ತೋರಿಸಿದ್ದು, ಕನ್ನಡಿಗರ ಮೇಲೆ ಚಪ್ಪಲಿ ಎಸೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಪೀರನವಾಡಿಯಲ್ಲಿ ಲಾಠಿ ಚಾರ್ಜ್ ಮಾಡಲಾಗಿದೆ. ನಮ್ಮ ನೆಲದಲ್ಲಿ ನಮ್ಮ ಹೋರಾಟಗಾರನ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಯಾವ ದೊಡ್ಡೆನಾಯಕನ ಒಪ್ಪಿಗೆ ಬೇಕಿಲ್ಲ. ಆದ್ರೆ, ರಾಜ್ಯ ಬಿಜೆಪಿ ಸರ್ಕಾರ ವೋಟ್ ರಾಜಕಾರಣಕ್ಕಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಬಿಟ್ಟು, ನೋಡೋಣ, ಅವಲೋಕನ ಮಾಡೋಣ, ಡಿಸಿ ಜೊತೆ ಚರ್ಚೆ ಮಾಡಿದ್ದೇನೆ ಅನ್ನೋ ಮಾತುಗಳು ಸಿಎಂ ಬಿ.ಎಸ್ ಯಡಿಯೂರಪ್ಪನವರು ಹೇಳುವ ಮೂಲಕ ಮೃದ ಧೋರಣೆ ತೋರುತ್ತಿದ್ದಾರೆ.

ಬೆಳಗಾವಿಯಲ್ಲಿರುವ ರಾಜಕಾರಣಿಗಳು ಸ್ಥಳೀಯ ಮರಾಠಿಗರಿಗೆ ಕುಮ್ಮಕ್ಕು ಕೊಡ್ತಿರುವುದು ಇಷ್ಟಕ್ಕೆಲ್ಲ ಕಾರಣ ಎಂದು ಹೇಳಲಾಗ್ತಿದೆ. ಎಂಇಎಸ್ ಪುಂಡರಿಗೆ ಒಳಗೊಳಗೆ ಬೆಂಬಲ ನೀಡ್ತಿರುವುದು ಇಷ್ಟಕ್ಕೆಲ್ಲ ಕಾರಣ ಎಂದು ಕನ್ನಡಪರ ಹೋರಾಟಗಾರರು ಆರೋಪಿಸಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ರೂ ರಾಜ್ಯ ಸರ್ಕಾರ ಕೈ ಕಟ್ಟಿಕೊಂಡು ಕುಳ್ತಿರುವುದು ಸಾಕಷ್ಟು ಅನುಮಾನ ಮೂಡಿಸ್ತಿದೆ.




Leave a Reply

Your email address will not be published. Required fields are marked *

error: Content is protected !!