ರೋಚಕ ಗೆಲುವು ಸಾಧಿಸಿದ ಟೀಂ ಇಂಡಿಯಾ

210

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನ 2-0ದಿಂದ ಲೀಡ್ ಸಾಧಿಸಿದೆ. ಈ ಮೂಲಕ ಸರಣಿಯನ್ನ ವಶ ಪಡಿಸಿಕೊಂಡಿದೆ.

ಟಾಸ್ ಗೆದ್ದ ಬ್ಯಾಟ್ ಮಾಡಿದ ಸಿಂಹಳಿಯರು ಅಸಲಂಕಾ 65, ಫರ್ನಾಂಡೋ 50 ಹಾಗೂ ಕರುನರಂತೆ 44 ರನ್ ಗಳ ಆಟದಿಂದಾಗಿ 9 ವಿಕೆಟ್ ಗಳ ನಷ್ಟಕ್ಕೆ 275 ರನ್ ಗಳಿಸಿತ್ತು. ಇದನ್ನು ಚೇಸ್ ಮಾಡಿದ ಟೀಂ ಇಂಡಿಯಾ, ದೀಪಕ ಚಹಾರ್ 69,  ಸೂರ್ಯಕುಮಾರ ಯಾದವ್ 53 ಹಾಗೂ ಮನೀಶ ಪಾಂಡ್ಯೆ 37 ರನ್ ಗಳಿಂದಾಗಿ 7 ವಿಕೆಟ್ ಕಳೆದುಕೊಂಡು 277 ರನ್ ಬಾರಿಸಿ ಗೆಲುವು ಸಾಧಿಸಿದೆ.

ಶ್ರೀಲಂಕಾ ಬೌಲರ್ ಗಳು ಟೀಂ ಇಂಡಿಯಾ ಆಟಗಾರರಿಗೆ ಸಾಕಷ್ಟು ಕಾಡಿದ್ದಾರೆ. ಹೀಗಾಗಿ ಪಂದ್ಯ ಕೊನೆಯ ಓವರ್ ತನಕ ಹೋಗಿದೆ. ಅಂತಿಮವಾಗಿ 49.1 ಓವರ್ ನಲ್ಲಿ ಆಟ ಮುಕ್ತಾಯವಾಗಿದೆ. ಈ ಮೂಲಕ 1 ಪಂದ್ಯ ಬಾಕಿ ಇರುವಾಗ್ಲೇ ಸರಣಿ ವಶಪಡಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!