ರಾಯಣ್ಣ ಪ್ರತಿಮೆ ಗಲಾಟೆ: 18 ಜನ ಶಾಸಕರಿದ್ರೂ ತುಟಿ ಬಿಚ್ಚುತ್ತಿಲ್ಲ

604

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಜಿಲ್ಲೆಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾನ ವಿಚಾರ ಆಗಸ್ಟ್ 15ರಿಂದಲೇ ಶುರುವಾಗಿದೆ. ಎರಡೂ ವಾರಗಳು ಕಳೆದು ಹೋದರೂ ಸ್ಥಳೀಯ ಶಾಸಕರು ತುಟಿ ಬಿಚ್ಚುತ್ತಿಲ್ಲ. ಪುಂಡ ಮರಾಠಿಗರಿಗೆ ಖಡಕ್ ಎಚ್ಚರಿಕೆ ನೀಡ್ತಿಲ್ಲ. ನಾಡು, ನುಡಿಗಿಂತ ಇವರಿಗೆ ರಾಜಕೀಯ ಮುಖ್ಯವಾಗಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಒಂದು ಕಾಲದಲ್ಲಿ ರಾಯಣ್ಣ ಸೇನೆ ರೆಡಿ ಮಾಡಿದ ಸಚಿವ ಕೆ.ಎಸ್ ಈಶ್ವರಪ್ಪ ಸಹ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಸಿಎಂ ಹರಿಕೆ ಉತ್ತರ ಕೊಡ್ತಾ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಲು ಬಿಡ್ತಿದ್ದಾರೆ.!

ಬೆಳಗಾವಿ ಜಿಲ್ಲೆ 18 ವಿಧಾನಸಭಾ ಕ್ಷೇತ್ರ, 1 ಲೋಕಸಭಾ ಕ್ಷೇತ್ರವನ್ನ ಹೊಂದಿದೆ. ಅರಭಾವಿ, ಅಥಣಿ, ಬೈಲಹೊಂಗಲ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮಾಂತರ, ಬೆಳಗಾವಿ ಉತ್ತರ, ಚಿಕ್ಕೋಡಿ ಸದಲಗಾ, ಗೋಕಾಕ, ಹುಕ್ಕೇರಿ, ಕಾಗವಾಡ, ಖಾನಾಪುರ, ಕಿತ್ತೂರ, ಕುಡುಚಿ, ನಿಪ್ಪಾಣಿ, ರಾಮದುರ್ಗ, ರಾಯಭಾಗ, ಸವದತ್ತಿ, ಯಮಕನಮರಡಿ ಹೀಗೆ 18 ವಿಧಾನಸಭಾ ಕ್ಷೇತ್ರಗಳನ್ನ ಹೊಂದಿದೆ. ಈ 18 ಜನ ಶಾಸಕರು ಇಲ್ಲಿನ ಪುಂಡ ಮರಾಠಿಗರನ್ನ ಕಂಟ್ರೋಲ್ ಮಾಡ್ತಿಲ್ಲ.

ತಮ್ಮ ವೋಟ್ ಗಳಿಗಾಗಿ ಇಲ್ಲಿನ ರಾಜಕಾರಣಿಗಳು ಮರಾಠಿ ಭಾಷೆಕರಿಗೆ ಮೃದುಧೋರಣೆ ತೋರಿಸ್ತಿದ್ದು, ಇದ್ರಿಂದ ಇಂದು ಕನ್ನಡಿರ ಮೇಲೆಯೇ ಚಪ್ಪಲಿ ಎಸೆಯುತ್ತಿದ್ದಾರೆ. ಎಂಇಎಸ್ ಪುಂಡಾಟಿಕೆಯಿಂದ ಇಲ್ಲಿನ ಹೊಲಸು ರಾಜಕೀಯ ಮೀತಿ ಮೀರಿದೆ. ಡಿಸಿಎಂ ಸೇರಿದಂತೆ ಮೂವರು ಸಚಿವರು, ನಿಗಮ ಮಂಡಳಿ ಅಧ್ಯಕ್ಷರು, ಸಂಸದರು ಬಿಜೆಪಿ ಅವರೆ ಇದ್ದರೂ ನೋಡಿಕೊಂಡು ಸುಮ್ಮನಿದ್ದಾರೆ. ತನ್ನದೆ ಕ್ಷೇತ್ರದಲ್ಲಿ ಬರುವ ಬಿಜೆಪಿ ಶಾಸಕ ಅಭಯ ಪಾಟೀಲ, ವಿರೋಧ ಪಕ್ಷದಲ್ಲಿರುವ ಶಾಸಕ ಸತೀಶ ಜಾರಕಿಹೊಳಿ, ಶಾಸಕಿರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ನಮ್ಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಇದ್ದಾರೆ. ಇದನ್ನ ನೋಡ್ತಿದ್ದಾರೆ. ಅಲ್ಲಿನ ಕನ್ನಡಿಗರ ಪರಿಸ್ಥಿತಿ ಹೇಗಿದೆ ಅನ್ನೋದರ ಚಿತ್ರಣ ಕಣ್ಮುಂದೆ ಬರುತ್ತೆ.




Leave a Reply

Your email address will not be published. Required fields are marked *

error: Content is protected !!