ಸೈಲೆಂಟ್ ಆಗಿದ್ದ ಸ್ಯಾಂಡಲ್ ವುಡ್ ನಲ್ಲಿ ಇದೀಗ ಮತ್ತೆ ಬೆಂಕಿ ಹತ್ತಿಕೊಂಡಿದೆ. ನಟಿ ಸಂಜನಾ ಬಾರ್ ವೊಂದರಲ್ಲಿ ಕುಡಿದು ಗಲಾಟೆ ಮಾಡಿ ನಿರ್ಮಾಪಕಿಗೆ ಹೊಡೆದಿದ್ದಾರೆ ಅಂತಾ ಹೇಳಲಾಗ್ತಿದೆ. ಅಲ್ದೇ, ನಿರ್ಮಾಪಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.
ಕ್ರಿಸ್ಮಸ್ ಈವ್ ಟೈಂನಲ್ಲಿ ಅಂದ್ರೆ ಡಿಸೆಂಬರ್ 24ರ ರಾತ್ರಿ ಕೋಝಿ ಬಾರ್ ನಲ್ಲಿ ಕುಡಿದಿದ್ದಾರೆ. ಈ ವೇಳೆ ನಿರ್ಮಾಪಕಿ ವಂದನಾ ಜೈನ್ ಹಾಗೂ ನಟಿ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ವಿಸ್ಕಿ ಬಾಟಲ್ ನಿಂದ ವಂದನಾಗೆ ನಟಿ ಸಂಜನಾ ಹೊಡೆದಿದ್ದಾಳೆ ಅನ್ನೋ ಆರೋಪ ಕೇಳಿ ಬಂದಿದೆ.
ಘಟನೆಯಿಂದ ಬೇಸತ ನಿರ್ಮಾಪಕಿ ವಂದನಾ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಿವುಡ್ ನಿರ್ಮಾಪಕಿಯಾಗಿರುವ ವಂದನಾಗೆ ಬೆಂಗಳೂರು ಅಂದ್ರೆ ಇಷ್ಟವಂತೆ. ಹೀಗಾಗಿ ಆಗಾಗ ಬೆಂಗಳೂರು ಬಂದು ಹೋಗ್ತಾರಂತೆ. ಅದ್ಯಾವ ಕಾರಣಕ್ಕೆ ಗಲಾಟೆ ಆಗಿದೆ ಗೊತ್ತಾಗಿಲ್ಲ. ಇಬ್ಬರನ್ನ ವಿಚಾರಣೆಗೆ ಕರೆಯಲಾಗಿದೆ.